ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಬೇಕೆಂಬುದು ಸಕಾಲ ದಶಮಾನೋತ್ಸವದ ಉದ್ದೇಶ‌ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

1 Min Read

ಚಿತ್ರದುರ್ಗ : ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು(ತಿದ್ದುಪಡಿ) ಅಧಿನಿಯಮ 2014 ನಿಗಧಿತ ಕಾಲಮಿತಿಯಲ್ಲಿ ಸೇವಾ ವಿಲೇವಾರಿಯ ಹತ್ತನೇ ವರ್ಷಾಚರಣೆ ಸಕಾಲ ದಶಮಾನೋತ್ಸವ ಜಾಥವನ್ನು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಬುಧವಾರ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಬಳಿ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಕಚೇರಿ ವೃತ್ತಕ್ಕೆ ಸಕಾಲ ದಶಮಾನೋತ್ಸವ ಆಗಮಿಸಿದ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ ರಾಜ್ಯಾದ್ಯಂತ ಸಕಾಲ ದಶಮಾನೋತ್ಸವ ಆಚರಿಸಲಾಗುತ್ತಿದ್ದು, ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಬೇಕೆಂಬುದು ಸಕಾಲ ದಶಮಾನೋತ್ಸವದ ಉದ್ದೇಶ.

ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರನ್ನು ವಿನಾ ಕಾರಣ ಅಲೆದಾಡಿಸದೆ ನಿಗಧಿತ ಕಾಲಮಿತಿಯೊಳಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕಾಗಿರುವುದರಿಂದ ನೌಕರರು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ, ಗ್ರೇಡ್-2 ತಹಶೀಲ್ದಾರ್, ಕಂದಾಯ ನಿರೀಕ್ಷಕ ಶರಣಪ್ಪ ಹಾಗೂ ತಾಲ್ಲೂಕು ಕಚೇರಿಯ ಎಲ್ಲಾ ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *