ಚಳ್ಳಕೆರೆ : ಸರ್ಕಾರಿ ಸವಲತ್ತುಗಳನ್ನು ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ಸ್ವಸಹಾಯ ಸಂಘ-ಸಂಸ್ಥೆಯವರು ಜವಾಬ್ದಾರಿ ಇರುತ್ತದೆ.
ನಾವೆಲ್ಲ ನಾಗರಿಕ ಸಮಾಜದಲ್ಲಿ ಬದುಕುತ್ತಿರುವುದರಿಂದ ಈ ಸಮಾಜದಲ್ಲಿ ಇರುವಂತಹ ಮತ್ತು ದುಸ್ಥಿತಿಯಲ್ಲಿರುವ ಅಂತಹ ಜನಗಳ ಕಷ್ಟ ಮತ್ತು ದುಃಖ ದುಮ್ಮಾನಗಳನ್ನು ಆಲಿಸಿ ಸಹಾಯ ಮಾಡುವ ಹೊಣೆಗಾರಿಕೆ ಈ ಎಲ್ಲಾ ಚುನಾಯಿತ ಪ್ರತಿನಿಧಿಗಳು ಮತ್ತು ಸ್ಥಳೀಯ ಸಂಘಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ರಘುಮೂರ್ತಿ ಹೇಳಿದರು .
ತಾಲೂಕಿನ ಹನುಮಂತನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಆಶಯದಂತೆ ಚಳ್ಳಕೆರೆ ತಾಲೂಕಿನಲ್ಲಿ ಈಗಾಗಲೇ 5 ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಮತ್ತು 32 ಗ್ರಾಮಗಳಲ್ಲಿ ಸಮಸ್ಯೆ ಮುಕ್ತ ಗ್ರಾಮದ ಕಡೆಗೆ ತಾಲ್ಲೂಕು ಆಡಳಿತದ ಹೆಜ್ಜೆ ಎಂಬ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಷ್ಟು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಪೌತಿ ಖಾತೆ, ಆರ್ ಟಿಸಿ, ನಲ್ಲಿರುವಂತೆ ಮಿಸ್ ಮ್ಯಾಚ್ ಪ್ರಕರಣಗಳು, ಪಿಂಚಣಿ ಪ್ರಕರಣಗಳು, ದಾರಿ ಪ್ರಕರಣಗಳು, ಸ್ಮಶಾನ ಪ್ರಕರಣಗಳು, ರೈತರ ಪರಿಹಾರ ಪ್ರಕರಣಗಳು, ಆಹಾರ ಪಡಿತರ ಪ್ರಕರಣಗಳು ಫೋಡಿ ಪ್ರಕರಣಗಳು ಸೇರಿದಂತೆ ಗ್ರಾಮದಲ್ಲಿ ಇರುವಂತಹ ಎಲ್ಲ ಸಮಸ್ಯೆಗಳಿಗೆ ತಿಲಾಂಜಲಿ ನೀಡಿ ಗ್ರಾಮಗಳ ಸಾರ್ವಜನಿಕರು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲಾಗಿದೆ.
ಹಾಗೆ ಸನ್ಮಾನ್ಯ ಕಂದಾಯ ಮಂತ್ರಿಗಳು ಹಾಗೂ ಈ ಭಾಗದ ಶಾಸಕರು ಮತ್ತು ಸಚಿವರಾದ ಶ್ರೀರಾಮುಲು ರವರು ಮತ್ತು ನಮ್ಮ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆಶಯದಂತೆ ರೈತರ ಬಡವರ ದೀನದಲಿತರ ಬಗ್ಗೆ ಇವರ ಬದುಕು ಬದಲಾಗಬೇಕೆಂಬ ಕನಸುಕಂಡ ಅಂತವರು ಅದಕ್ಕಾಗಿಯೇ ಇಂತಹ ಕಾರ್ಯಕ್ರಮವನ್ನು ಸರ್ಕಾರದಿಂದ ರೂಪಿಸಲಾಗಿದೆ.
ತಾಲೂಕು ಆಡಳಿತದಲ್ಲಿ ಬರುವಂತಹ ನಾವೆಲ್ಲ ಅಧಿಕಾರಿಗಳು ಸಮಾಜದ ಮತ್ತು ಸರ್ಕಾರದ ಋಣದಲ್ಲಿ ಇದ್ದೇವೆ. ಚಳ್ಳಕೆರೆ ತಾಲ್ಲೂಕು ಇಡೀ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಡವರು, ಪರಿಶಿಷ್ಟ ವರ್ಗದವರು, ಮುಗ್ಧರು ಇರುವಂತಹ ತಾಲೂಕು ಇದಾಗಿದ್ದು, ಇಂತಹ ತಾಲೂಕಿನಲ್ಲಿ ನಮ್ಮಗಳ ಶಕ್ತಿಮೀರಿ ನೀಡಿ ಇಂತಹ ಬಡವರ ಕೆಲಸ ಮಾಡಿ ಇವರ ಬದುಕನ್ನು ಚಲಾಯಿಸಬೇಕೆಂದು ದೀಕ್ಷೆ ಪಡೆದುಕೊಂಡಿದ್ದೇವೆ.
ಈ ಹಿನ್ನೆಲೆಯಲ್ಲಿ ಈ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಂಘ-ಸಂಸ್ಥೆಯವರು ರೈತರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಒತ್ತು ತಂದಲ್ಲಿ ತಕ್ಷಣವೇ ಸ್ಪಂದಿಸಿ ಬಗೆಹರಿಸಲಾಗುವುದು. ಗಾಂಧೀಜಿಯವರು ಕಂಡಂತಹ ರಾಮ ರಾಜ್ಯದ ಕನಸು ಅಂಬೇಡ್ಕರ್ ಅವರ ಕಂಡಂತಹ ಸಮಾನತೆಯ ಕನಸು ನನಸಾಗಬೇಕಾದರೆ ಚುನಾಯಿತ ಪ್ರತಿನಿಧಿಗಳು ವರ್ಗ ವ್ಯಕ್ತಿ ಮತ್ತು ಪಕ್ಷ ರಹಿತವಾಗಿ ಸಾರ್ವಜನಿಕರ ಕೆಲಸ ಮಾಡಿದರೆ ನಾವು ಸಮಾಜಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ನಾಯಕನಟ್ಟಿ ಭಾಜಪ ಬ್ಲಾಕ್ ಅಧ್ಯಕ್ಷ ರಾಮರೆಡ್ಡಿ ಮಾತನಾಡಿ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಹಲವರು ವಿಸ್ತೀರ್ಣದಲ್ಲಿ ಹಿತ್ತಲುಗಳು ನಿರ್ಮಿಸಿ ಕೊಂಡಿದ್ದು ಇವುಗಳನ್ನು ಪತ್ತೆ ಮಾಡಿ ಸರ್ಕಾರದ ನಿಯಮಾವಳಿಯ ರೀತಿಯಲ್ಲಿ ತೆರವುಗೊಳಿಸಲು ಕ್ರಮವಹಿಸಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾರಕ್ಕ ತಿಪ್ಪೇಸ್ವಾಮಿಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಾಜಣ್ಣ,ಗೌರಸಮುದ್ರ ಗ್ರಾಮ ಪಂಚಾಯಿತಿ ಸದಸ್ಯರಾದ ಓಬಣ್ಣ,ಶಶಿಧರ್,ತಿಮ್ಮಾರೆಡ್ಡಿ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.