ಬೆಳಗಾವಿ: ಬಿಜೆಪಿಯವರು ಸಾವಿನ ಮನೆಯಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಜೊತೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ ಎಂಬ ಆರೋಪವಿದೆ. ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಂತೋಷ್ ಪಾಟೀಲ್ ಬಿಜೆಪಿಯ ಕಾರ್ಯಕರ್ತ. ಅದು ಎಲ್ಲರಿಗೂ ಗೊತ್ತಿದೆ. ಅವನು ಸಾಯುವಂತ ಸಮಯದಲ್ಲಿ ನಿಮಗೆಲ್ಲಾ ಒಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದರು. ನಮಗೆ ಅವರಿಗೂ ಸಂಬಂಧ ಚೆನ್ನಾಗಿದ್ದಿದ್ದರೆ ನನ್ನ ಹೆಸರನ್ನು ಅದರಲ್ಲಿ ಸೇರಿಸಿ, ಅಕ್ಕ ನೀವೂ ನನಗೆ ಸಹಾಯ ಮಾಡಿ ಅಂತ ಕೇಳಬಹುದಿತ್ತಲ್ವಾ ಎಂದಿದ್ದಾರೆ.
ಬಿಜೆಪಿ ಸರ್ಕಾರಕ್ಕೆ, ಯಡಿಯೂರಪ್ಪ ಸಾಹೇಬ್ರಿಗೆ, ಮೋದಿಯವರ ಭಕ್ತ ಅಂತೆಲ್ಲ ಹೇಳಿಕೊಂಡಿದ್ದಾರೆ. ಇದಕ್ಕೆ ನನಗೆ ಬಾಲಿಶ ಅನ್ನಿಸುತ್ತೆ. ನನ್ನ ಕ್ಷೇತ್ರದಲ್ಲಿ ನನ್ನ ಗಮನಕ್ಕೆ ಬಾರದೆ ಬಿಜೆಪಿಯ ಗ್ರಾಮ ಪಂಚಾಯತಿ ಅಂತ ಅವನೇ ಹೇಳಿಕೊಂಡಿದ್ದ ಅದು ಸಾರ್ವಜನಿಕವಾಗಿ. ಅಧ್ಯಕ್ಷರ ಜೊತೆ ಈಶ್ವರಪ್ಪ ಹೇಳಿದ್ದಾರೆ ಅಂತ ಕೆಲಸ ಮಾಡಿದರೆ ಅದು ಅಕ್ಕನಿಗೆ ಅಂತಾನಾ ಅಥವಾ ಬಿಜೆಪಿ ಸಂಗಟನೆಗಾ..? ಎಂದು ಪ್ರಶ್ನಿಸಿದ್ದಾರೆ.
ಪಾಪಾ ರೇಣುಕಾಚಾರ್ಯ ಅವರು ರಾಜಕಾರಣಿಯಾಗಬಾರದು ಅಣ್ಣಾ ನೀನು ರಾಜಕಾರಣಕ್ಕೆ ಬೇಡಪ್ಪ ನೀನು ತುಂಬಾ ಹುಷಾರಾಗಿ ಇದ್ದೀಯಾ. ಸಿಬಿಐ ಡೈರೆಕ್ಟರ್ ಆಗಿ ಬಿಡಣ್ಣ ಅಂತೀನಿ. ಈ ವಿಚಾರದಲ್ಲಿ ನಾವೂ ನ್ಯಾಯದ ಪರ ಹೋರಾಟ ಮಾಡ್ತೀವಿ. ಅವರು ಎಷ್ಟೇ ನನ್ನ ಮೇಲೆ ಹೆಗರಾಡಿದ್ರು ನಾನು ಹೋರಾಡುತ್ತೇನೆ. ಇಡೀ ಬಿಜೆಪಿಯನ್ನು ಇಷ್ಟು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಇದೆಯಾ..? ಎಂದು ಪ್ರಶ್ನಿಸಿ ಧನ್ಯವಾದ ಹೇಳಿದ್ದಾರೆ.