ಬೆಂಗಳೂರು: ಈಶ್ವರಪ್ಪ ವಿರುದ್ಧ 40% ಕಮೀಷನ್ ಆರೋಪ ಹೊರಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನೇರವಾಗಿ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೊದಲು ಅರೆಸ್ಟ್ ಮಾಡಲಿ ಎಂದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಯಾರು ಕಾರಣ ಹೇಳಿ ಸತ್ತಿದ್ದಾನೆ. ಈಗ ಆತನ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದಾಗ ಅವರ ಮೇಲೆ ಮರ್ಡರ್ ಕೇಸ್ ಹಾಕಬೇಕು, ಡಿಸ್ಮಿಸ್ ಮಾಡಬೇಕಿ. ಈಶ್ವರಪ್ಪ ಏನು ಹೇಳ್ತಾರೆ ಅನ್ನೋದು ಮುಖ್ಯವಲ್ಲ.
ಸಂತೋಷ್ ಡೆತ್ ನೋಟ್ ಬರೆದು ಇಟ್ಟಿದ್ದಾನೆ. ನನ್ನ ಸಾವಿಗೆ ಯಾರು ಕಾರಣ ಅಂತ ನೇರ ಆರೋಪ ಮಾಡಿ ಸತ್ತಿದ್ದಾನೆ. ಈಗ ಸಚಿವ ಈಶ್ವರಪ್ಪನನ್ನು ಅರೆಸ್ಟ್ ಮಾಡಬೇಕು. ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ, ಆರೋಪ ಮಾಡಿದ್ದರು. ಆಗ ಕೆ ಜೆ ಜಾರ್ಜ್ ರಾಜೀನಾಮೆ ನೀಡಿದ್ದರು. ಈಗ ಈಶ್ವರಪ್ಪ ಕೂಡ ರಾಜೀನಾಮೆ ನೀಡಬೇಕು. ಅವರನ್ನು ಮೊದಲು ಬಂಧಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.