ಇಸ್ಲಮಾಬಾದ್ : ಪಾಕಿಸ್ತಾನಕ್ಕೆ ನೂತನ ಪ್ರಧಾನಿ ಆಯ್ಕೆಯಾಗಿದೆ. ಶೆಹಬಾಜ್ ಶರೀಫ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದ ಪೀಪಲ್ ಪಾರ್ಟಿ ಹಾಗೂ ಇತರೆ ಮುಖಂಡರೆಲ್ಲಾ ಸೇರಿ ಶೆಹಬಾಬ್ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ.
ಶೆಹಬಾಬ್ ಶರೀಫ್ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಸಹೋದರ ಆಗಿದ್ದಾರೆ. ಭಾನುವಾರ ನಡೆದ ಬೆಳವಣಿಗೆಯಲ್ಲಿ ಭಿಲೋವಾಲ್ ಭುಟ್ಡೋ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆದಿದೆ. ಎಲ್ಲರೂ ಸೇರಿ ಮೈತ್ರಿಕೂಟದ ಮುಖಂಡರನ್ನಾಗಿ ಆಯ್ಕೆ ಮಾಡಿದೆ. ಅವಿಶ್ವಾಸನೆ ಮಂಡನೆಯಲ್ಲಿ ಇಮ್ರಾನ್ ಖಾನ್ ಸೋಲು ಅನುಭವಿಸಿದ ಕಾರಣ, ಹೊಸ ಪ್ರಧಾನಿ ಆಯ್ಕೆಯಾಗಿದ್ದಾರೆ.
ಇನ್ನು ಹೊಸ ಪ್ರಧಾನಿ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, 16 ಸಾವಿರ ಕೋಟಿ ರೂಪಾಯಿ ಮತ್ತು 8 ಸಾವಿರ ಕೋಟಿ ರೂಪಾಯಿಯ ಭ್ರಷ್ಟಾಚಾರದ ಕೇಸ್ ಹೊಂದಿರುವ ವ್ಯಕ್ತಿ ಆ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. ದೇಶಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇರಲಾರದು. ರಾಷ್ಟ್ರೀಯ ಅಸೆಂಬ್ಲಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಇಮ್ರಾನ್ ಖಾನ್ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.