Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗೆ ಅಸಮಾಧಾನ ಹೊರ ಹಾಕಿದ ಮಾಧುಸ್ವಾಮಿ..!

Facebook
Twitter
Telegram
WhatsApp

ಬೆಳಗಾವಿ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಮುಸ್ಲಿಂ ವಿರುದ್ಧ ಕೆಲ ಹಿಂದೂಪರ ಸಂಘಟನೆಗಳು ಹರಿಹಾಯುತ್ತಿದ್ದಾರೆ. ಈ ಎಲ್ಲಾ ಘಟನೆಗಳ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ ಅಸಮಾಧಾನ ಹೊರ ಹಾಕಿದ್ದಾರೆ.

ಈ ರೀತಿಯ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವಂತದ್ದಲ್ಲ. ಯಾರಿಗೋ ತೊಂದರೆ ಕೊಡುವುದು, ಶಾಂತಿ ಕದಡುವುದನ್ನು ಮಾಡುವುದು ಗೌರವ ತರುವುದಿಲ್ಲ. ಆಡಳಿತ ಮಾಡಬೇಕು ಎಂದರೆ ಎಲ್ಲರೂ ಈ ದೇಶದ ಪ್ರಜೆಗಳು ಒಂದೇ ಎಂದು‌ ಭಾವಿಸಬೇಕು. ಆಕಸ್ಮಿಕವಾಗಿ ನಡೆಯುವುದು ಬೇರೆ. ಆದರೆ ಹುಡುಕಿಕೊಂಡು ಹೋಗುವುದನ್ನು ಯಾರು ಒಪ್ಪುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ಚಂದ್ರು ಕೊಲೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಗೃಹ ಮಂತ್ರಿಗಳಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಗೃಹ ಸಚಿವರು ತಕ್ಷಣ ರಿಯಾಕ್ಟ್ ಮಾಡಿದ್ದು, ಗೊಂದಲಕ್ಕೆ‌ ಕಾರಣವಾಗಿದೆ. ಸಮಾಧಾನವಾಗಿ ಯೋಚಿಸಿ ಉತ್ತರಿಸಬೇಕು. ಶಾಂತಿ ಇರುವ ಕಡೆ ಅಭಿವೃದ್ಧಿಗೆ ಬೆಲೆ ಜಾಸ್ತಿ. ಶಾಂತಿ ಕದಡಿದರೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

ಸುದ್ದಿಒನ್, ಹೊಸದುರ್ಗ, ಮೇ. 20 : ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಸೂಗೂರುನಲ್ಲಿ ಹೆಚ್ಚು ಮಳೆ

  ಚಿತ್ರದುರ್ಗ,ಮೇ.20 : ಭಾನುವಾರ ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ ಸೂಗೂರುನಲ್ಲಿ 52.4ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 11.4 ಮಿ.ಮೀ, ಇಕ್ಕನೂರು 26 ಮಿ.ಮೀ,

error: Content is protected !!