ನಕಲಿ‌ ಮತ್ತು ನಿಜವಾದ ನಂಬಿಕೆ ನಡುವಿನ ವ್ಯತ್ಯಾಸ: ರಾಹುಲ್, ಅಮಿತ್ ಶಾ ಫೋಟೋ ಹಾಕಿ ಸುರ್ಜೆವಾಲ್ ಹೇಳಿದ್ದೇನು..?

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಂಠದಲ್ಲಿ ಶ್ರೀಗಳ ಜನ್ಮದಿನೋತ್ಸವ ನಡೆಯುತ್ತಿದೆ. ಈ ಜನ್ಮದಿನೋತ್ಸವಕ್ಕೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಕೊಟ್ಟು ಬಂದಿದ್ದಾರೆ. ಇದೀಗ ಈ ಇಬ್ಬರ ನಡವಳಿಕೆಯನ್ನ ಕಾಂಗ್ರೆಸ್ ಉಸ್ತುವಾರಿ ಸಂದೀಪ್ ಸುರ್ಜೆವಾಲ ಟ್ವೀಟ್ ಮಾಡಿ ನಕಲಿ ಮತ್ತು ನಿಜವಾದ ನಂಬಿಕೆ ಬಗ್ಗೆ ಮಾತನಾಡಿದ್ದಾರೆ.

ರಾಹುಲ್ ಗಾಂಧಿ ವೇದಿಕೆ ಮೇಲೆ ಕುಳಿತಾಗ ಶೂ ಬಿಟ್ಟು ಕುಳಿತಿದ್ದಾರೆ. ಅದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೂ ಧರಿಸಿಯೆ ಕುಳಿತಿದ್ದಾರೆ. ಇದು ಸುರ್ಜೇವಾಲ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಸ್ವಾಮೀಜಿ ಕಡೆಗೆ ಕಾಲ ಮೇಲೆ ಕಾಲು ಹಾಕಿದ್ದಾರೆ ಅಮಿತ್ ಶಾ. ರಾಹುಲ್ ಗಾಂಧಿ ಕಾಲಿನ ಮೇಲೆ ಕಾಲು ಹಾಕಿದ್ದರು, ಸ್ವಾಮೀಜಿ ಕಡೆಗೆ ಹಾಕಿಲ್ಲ. ಹೀಗಾಗಿ ಇಬ್ಬರ ಬಗ್ಗೆ ವಿವರಣೆ ನೀಡಿದ್ದಾರೆ.

ಅಮಿತ್ ಶಾ ಆಗಲಿ ಯಾರೇ ಆಗಲಿ ಮಠದ ಸಂಸ್ಕೃತಿಯನ್ನು ಪಾಲನೆ ಮಾಡಬೇಕು. ಮಠದ ಒಳಗೆ ಶೂ ಹಾಕಿ ಸ್ವಾಮೀಗಳಗಳ ಕಡೆ ಕಾಲು ತೋರಿಸೋದಲ್ಲ. ಅಲ್ಲಿ ನಿಮ್ಮ ಹುದ್ದೆ ಅಪ್ರಸ್ತುತ. ಬಸವಣ್ಣನವರು ಹೇಳಿದಂತೆ ಎಲ್ಲರು ಸಮಾನರೆ. ಇಲ್ಲಿ ನಕಲಿ ಮತ್ತು ನಿಜವಾದ ನಂಬಿಕೆಗಳ ವ್ಯತ್ಯಾಸವನ್ನು ಕಾಣಬಹುದು ಎಂದು ಟ್ವೀಟ್ ಮಾಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!