ಬೆಳಗಾವಿ: ಗೋಕಾಕ್ ನಲ್ಲಿ ಎಂಎಲ್ಸಿ ವಿಶ್ವನಾಥ್ ಬಿಜೆಪಿ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಮಾಧ್ಯಮದವರು ಕೇಳಿದ ಸಚಿವ ಸಂಪುಟದ ಬಗ್ಗೆ ಮಾತನಾಡಿದ ಅವರು, ಕ್ಯಾಬಿನೇಟ್ ರಿ ಶಫಲ್ ಬಗ್ಗೆ ಗೊತ್ತಿಲ್ಲ. ನಾನು ಆಕಾಂಕ್ಷಿ ಕೂಡ ಅಲ್ಲ.
ಸಚಿವ ಆಗಬೇಕು ಎಂದುಕೊಂಡಿದ್ದ ಸಮಯದಲ್ಲಿ ಅದೆಲ್ಲವನ್ನು ಮಣ್ಣು ಮಾಡಿದ್ದು ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ. ಸಮ್ಮಿಶ್ರ ಸರ್ಕಾರದ ಪಾತ್ರವನ್ನ, ಬಿಜೆಪಿ ಸರ್ಕಾರದ ಸ್ಥಾಪನೆ. ಆ ಸಂದರ್ಭದಲ್ಲಿ ನಾವೆಲ್ಲಾ ಎಷ್ಡು ಶ್ರಮ ಹಾಕಿದೆವು. ಮತ್ತೆ ನಮ್ಮನ್ನ ಎಂಎಲ್ಸಿ ಮಾಡುವ ವಿಚಾರದಲ್ಲಿ ಅನ್ಯಾಯವಾಗಿದೆ. ಅಸೆಂಬ್ಲಿಯಿಂದ ಎಲೆಕ್ಟ್ ಆಗಿ ಅದನ್ನ ತಪ್ಪಿಸಿ ನಾಮಿನೇಟ್ ಇಟ್ಟುಕೊಂಡ್ರು. ಆಗಲೂ ನನಗೂ ಅನ್ಯಾಯವಾಗಿದೆ. ನಾನು ಆಕಾಂಕ್ಷಿಯಲ್ಲ. ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದೇನೆ.
ರಮೇಶ್ ಜಾರಕಿಹೊಳಿಗೆ ಸಚುವ ಸ್ಥಾನ ಕೈತಪ್ಪುತ್ತಿರುವ ವಿಚಾರ ಮಾತನಾಡಿದ ಅವರು, ರಮೇಶ್ ಗೆ ಸಚಿವ ಸ್ಥಾನ ಕೈತಪ್ಒಲು ಕಾಣುವ ಕೈಗಳೇ ಕಾರಣವಾಗಿವೆ. ರಮೇಶ್ ಮತ್ತು ನನ್ನನ್ನ ಕಾಣುವ ಕೈಗಳೇ ಮುಗಿಸುತ್ತಿವೆ.
ಸಿದ್ದರಾಮಯ್ಯ, ನಾನು, ರಮೇಶ್ ಹಿಂದುಳಿದ ವರ್ಗದವರು. ಹಿಂದುಳಿದ ವರ್ಗದವರು ಯಾರು ಬದುಕಂಗಿಲ್ಲ ಇಲ್ಲಿ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಜೊತೆಗೆ ಬಂದವರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಅವರು ಕೂಡ ಮುಖ್ಯ ಪಾತ್ರವಹಿಸಿದವರು. ಅವರಿಗೆ ಹೀಗೆ ಆಟವಾಡಿಸಿದರೆ ಹೇಗೆ..? ಇದೆಲ್ಲಾ ತಾತ್ಕಾಲಿಕ ನಿಮಗೆ ಅಧಿಕಾರ ಕೊಟ್ಟವರೆ ನಾವೂ. ನಾವೂ ಕೊಟ್ಟ ತ್ರಿಶೂಲದಿಂದ ನಮ್ಮನ್ನೇ ತಿವಿಯುತ್ತಿದ್ದೀರಿ. ರಮೇಶ್ ಮತ್ತು ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರನ್ನ ಕರೆದುಕೊಂಡು ಬಂದ್ವಿ ಸಿಎಂ ಆದ್ರೂ. ಆದ್ರೆ ಏನಾಯ್ತು ನಮ್ಮನ್ನೇ ಕಡೆಗಣಿಸಿದ್ರು. ರಾಜಕೀಯದಲ್ಲಿ ಕೃತಜ್ಞತೆಯೇ ಇಲ್ಲದಂತಾಗಿದೆ. ರಾಜಕಾರಣಿಗಳಲ್ಲಿ ಕೃತಜ್ಞತೆಯಿಲ್ಲದಂತಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.