ಹಿಜಾಬ್, ದುಪ್ಪಟ್ಟ ಜೊತೆ ಸ್ವಾಮೀಜಿ ಪೇಟ ಹೋಲಿಸಬಾರದು : ಪ್ರಮೋದ್ ಮುತಾಲಿಕ್

suddionenews
1 Min Read

ಬಾಗಲಕೋಟೆ: ಹಿಜಾಬ್ ಬಗ್ಗೆ ಹೇಳಿಲ್ಲ, ದುಪ್ಪಟ್ಟ ಬಗ್ಗೆ ಹೇಳಿದ್ದೆ ಅಂತಾರೆ ದುಪ್ಪಟ್ಟ, ಹಿಜಾಬ್ ನಡುವೆ ಅಂತಹ ವ್ಯತ್ಯಾಸವೇನು ಇಲ್ಲ. ಹಿಜಾಬ್, ದುಪ್ಪಟ್ಟ ಜೊತೆ ಸ್ವಾಮೀಜಿಯ ಪೇಟಾ ಹೋಲಿಸಬಾರದು ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್ ಕೊಟ್ಟಿದ್ದಾರೆ.

ಜಾತ್ಯಾತೀತತೆ ಹೆಸರಿನಲ್ಲಿ ಹಿಂದೂಗಳನ್ನೇ ತುಳಿಯುವ ಪ್ರಕ್ರಿಯೆ ನಡೆದಿದೆ. ಸಿದ್ದರಾಮಯ್ಯ ನವರು ಈಗಾಗಲೇ ಕೇಸರಿ ಶಾಲನ್ನು ಬಿಸಾಕಿದ್ದರು. ದೇವಸ್ಥಾನದ ಬಗ್ಗೆಯೂ ಅಸಹ್ಯವಾಗಿ ಮಾತನಾಡಿರುವುದು ಇದೆ. ಸಿಎಂ ಆಗಿದ್ದಾಗ ಮಠಗಳ ಸರ್ಕಾರೀಕರಣ ಮಾಡಲು ಯತ್ನಿಸಿದ್ದರು. ಈ ರೀತಿ ಮಾಡುವುದರಿಂದಲೇ ಕಾಂಗ್ರೆಸ್ ದೇಶದಲ್ಲಿ ನೆಲಕಚ್ಚಿದೆ.

ಕರ್ನಾಟಕದಲ್ಲಿ ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸ್ವಲ್ಪ ಜೀವ ಇದೆ. ಹಿಂದೂಗಳಿಗೆ ಅವಹೇಳನ ಮಾಡಿ ಅದನ್ನು ನೆಲಸಮ ಮಾಡಿಕೊಳ್ಳಬೇಡಿ. ಡಾ.ಅಂಬೇಡ್ಕರ್ ಎಲ್ಲರಿಗೂ ಸಮಾನತೆ ಸಿಗಬೇಕೆಂದು ಹೇಳಿದ್ದರು. 1975-76ರಲ್ಲಿ ಇಂದಿರಾ ಗಾಂಧಿ ಜಾತ್ಯಾತೀತ ಪದ ಸೇರಿಸಿದ್ರು. ಜಾತ್ಯಾತೀತೆಯ ಹೆಸರಿನಲ್ಲಿ ಹಿಂದೂಗಳನ್ನು ತುಳಿಯುವ ಕೆಲಸವಾಗಿದೆ. ಅವಹೇಳನ ಮಾಡುವಂತ ಪ್ರಕ್ರಿಯೆ ಆಗಬಾರದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *