ಮೈಸೂರು: ಸ್ವಾಮೀಜಿಗಳು ಖಾವಿ ತೊಡುತ್ತಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆ ಹೇಳಿಕೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸ್ವಾಮೀಜಿಯವರ ಬಗ್ಗೆ ಅಗೌರವವಾಗಿ ನಾನೂ ಮಾತನಾಡಿಲ್ಲ. ಅವರ ಬಗ್ಗೆ ಅಪಾರವಾದ ಗೌರವ ಇದೆ. ಯಾವುದನ್ನೂ ಹೋಲಿಕೆ ಮಾಡಿಲ್ಲ. ನಾನು ಯಾವತ್ತು ಅವರುಗಳ ಬಗ್ಗೆ ಅಗೌರವದಿಂದ ಮಾತನಾಡಿಲ್ಲ ಎಂದಿದ್ದಾರೆ.
ಇನ್ನು ನಾನು ಹೇಳಿಕೆ ನೀಡಿದ್ದರಲ್ಲಿ ಹಿಜಾಬ್ ಬಗ್ಗೆ ಪ್ರಶ್ನೆಯೇ ಬರಲ್ಲ. ಹಿಜಾಬ್ ಬಗ್ಗೆ ನಾನೂ ಮಾತಾಡಿದೆನಾ..? ದುಪ್ಪಟ್ಟ ಬಗ್ಗೆ ಅಷ್ಟೇ ಮಾತಾಡಿದ್ದು. ಕೋರ್ಟ್ ನಿರ್ಧಾರ ನೀಡಿದೆ, ಹಿಜಾಬ್ ಹಾಕಬಾರದು ಅಂತ. ಅದಕ್ಕೆ ಗೌರವ ಕೊಡೋಣಾ. ಆದ್ರೆ ಸರ್ಕಾರದವರು ಪರೀಕ್ಷೆ ಬರೆಯೋದಕ್ಕೆ ಅವಕಾಶ ಕೊಡಿ.ದುಪ್ಪಟ್ಟ ಹಾಕಲು ಅವಕಾಶ ಕೊಡಿ ಅಂತ ಹೇಳಿದ್ದು. ಸಮವಸ್ತ್ರ ಹಾಕಿ, ದುಪ್ಪಟ್ಟ ಹಾಕೋದಕ್ಕೂ ಅವಕಾಶ ಕೊಡಿ ಎಂದಿದ್ದಾರೆ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಲಹೆ ಕೊಟ್ಟಿದ್ದೇವೆ ಎಂದಿದ್ದಾರೆ.