ರಾಮನಗರ: ಚನ್ನಪಟ್ಟಣ, ರಾಮನಗರ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನ ಜನ ಬಿಟ್ಟು ಕೊಟ್ಟಿಲ್ಲ. ಆದ್ರೆ ಇತ್ತೀಚೆಗೆ ಯೋಗೀಶ್ವರ್ ಪಾರು ಪಥ್ಯ ಸಾಧಿಸುತ್ತಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದ್ರೆ ಈಗ ನಿಖಿಲ್ ಕುಮಾರಸ್ವಾಮಿ ಅದಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಯಾಕಂದ್ರೆ ಇತ್ತೀಚೆಗೆ ಯೋಗೀಶ್ವರ್ ಚನ್ನಪಟ್ಟಣದಲ್ಲಿ ಹೆಚ್ಚು ಓಡಾಡಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ಜೆಡಿಎಸ್ ನಾಯಕರನ್ನ ತನ್ನತ್ತ ಸೆಳೆದಿದ್ದಾರೆ. ಆಗಾಗ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆಯುತ್ತಿತ್ತು. ಇದೆಲ್ಲಾ ಬೆಳವಣಿಗೆ ಗಮನಿಸಿದ್ರೆ ಜನ ಕುಮಾರಸ್ವಾಮಿ ಅವರನ್ನ ಕೈ ಬಿಡುತ್ತಾರಾ ಎಂಬ ಅನುಮಾನಗಳು ಮೂಡಿದ್ದವು.
ಆದ್ರೀಗ ಯುವರಾಜ ಆ ಸ್ಥಾನವನ್ನ ಗಟ್ಟಿಗೊಳಿಸುವ ಎಲ್ಲಾ ದಾರಿಯಲ್ಲೂ ಸಂಚರಿಸುತ್ತಿದ್ದಾರೆ. ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗ್ಲೆ ನಿಖಿಲ್ ಅಖಾಡಕ್ಕೆ ಇಳಿದಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಮುಂದಾಗಿದ್ದಾರೆ. ತಾಯಿ ಅನಿತಾ, ತಂದೆ ಕುಮಾರಸ್ವಾಮಿ ಸ್ಪರ್ಧಿಸಿದ್ದಾಗಲೂ ನಿಖಿಲ್ ಕುಮಾರಸ್ವಾಮಿ ತಾಲೂಕು ಮಟ್ಟದಲ್ಲಿ ಪ್ರವೇಶ ಮಾಡಿರಲಿಲ್ಕ. ಆದ್ರೀಗ ತಂದೆ ಕ್ಷೇತ್ರಗಟ್ಟಿಗೊಳಿಸುವಲ್ಲಿ ಸಕ್ರಿಯರಾಗಿದ್ದಾರೆ.