ಚಿಕ್ಕಮಗಳೂರು: ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುತ್ತಿದ್ದಾರೆ. ಉಡುಪಿಯಲ್ಲಿ ಶುರುವಾದ ಈ ಪದ್ಧತಿ ಈಗ ರಾಜ್ಯದ ಹಲವು ಮೂಲೆಯಲ್ಲೂ ಹಬ್ಬಿದೆ. ಈ ಬಗ್ಗೆ ಸಿ ಟಿ ರವಿ ಮಾತನಾಡಿದ್ರು, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೆ ಇರುತ್ತೆ ಎಂದು ಬಿಜೆಪಿ ನಾಯಕ ಸಿ ಟಿ ರವಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಗಂಗೊಳ್ಳಿಯಲ್ಲಿ ಮೀನು ಖರೀದಿಸದಂತೆ ಆಗ ಫರ್ವಾನು ಹೊರಡಿಸಿದ್ದರು. ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಂರು ಖರೀದಿಸುತ್ತಾರಾ..? ಅವರ ದೇವರಿಗೆ ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಆಗೋದಿಲ್ಲ. ಅವರ ದೇವರಿಗೆ ಒಪ್ಪಿಸಿದ್ದನ್ನ ನಮ್ಮ ದೇವರು ಒಪ್ಪಿಕೊಳ್ಳುತ್ತಾನಾ.? ನಮಗೆ ಉದಾರತೆಯ ಪಾಠವನ್ನ ಯಾರು ಹೇಳೋದು ಬೇಡ.

ಜಾತ್ಯಾತೀತತೆಯ ಬಗ್ಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲೇ ಹೇಳಿದ್ದಾರೆ. ಭಜನೆಯಲ್ಲಿ ಈಶ್ವರ, ಅಲ್ಲ ತೇರೆನಾಮ್ ಅಂತ ಹೇಳುತ್ತೇವೆ. ನಮ್ಮ ಎಲ್ಲಾ ದೇವಸ್ಥಾನದಲ್ಲಿಯೂ ಭಜನೆಯಲ್ಲಿವಾ ಸಾಲನ್ನ ಹೇಳುತ್ತೇವೆ. ಆದ್ರೆ ಯಾವುದಾದರೂ ಮಸೀದಿಯಲ್ಲಿ ಹೇಳಿರೋದನ್ನ ಕೇಳಿದ್ದೇವಾ..? ಎಂದು ಪ್ರಶ್ನಿಸಿದ್ದಾರೆ.


