ಚಿತ್ರದುರ್ಗ: ನಾಟಕ ದೇಶದ ಅತ್ಯಂತ ಪ್ರಾಚೀನ ಕಲೆಯಾಗಿದೆ. ಭಾರತೀಯ ರಂಗಭೂಮಿಯಲ್ಲಿ ಸಂಸ್ಕೃತ ನಾಟಕಕಾರರು ಹಾಗೂ ಕೃತಿಗಳು ಮಹತ್ವದ ಸ್ಥಾನವನ್ನು ಗಳಿಸಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.
ನಗರದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಶಿವಸಂಚಾರ ನಾಟಕೋತ್ಸವ -2022 ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ನಾಟಕ ಕೃತಿಗಳು ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸಾತ್ವಿಕ ಅಭಿನಯಗಳನ್ನು ಒಳಗೊಂಡ ಶ್ರೀಮಂತವಾದ ಕಲೆಯಾಗಿದೆ. ಪಾಶ್ವಾತ್ಯ ಹಾಗೂ ಪೌರಾತ್ಯ ನಾಟಕಗಳು ಜನರ ಮೇಲೆ ಪ್ರಭಾವ ಬೀರುತ್ತವೆ ಎಂದರು.
ಹಿರಿಯ ಸಾಹಿತಿ ಜಿ.ಎನ್.ಮಲ್ಲಿಕಾರ್ಜುನಪ್ಪ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಕಲೆ ಎನ್ನುವುದು ಬದುಕನ್ನು ಉತ್ತುಂಗ ಶೃಂಗಕ್ಕೆ ಕೊಂಡೊಯ್ಯುವ ಸಾಮರ್ಥ ಕಲಾವಿದರಿಗೆ ಲಭಿಸಲಿ. ಕಲಾವಿದರು ಮುಖ್ಯವಾಗಿ ಈ ನಾಡಿನಲ್ಲಿ ದೇಶ ಮತ್ತು ಕಲೆ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಜಿ.ಕೆ.ಕಲ್ಲೇಶ್ವರಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ವಾರ್ತಾಧಿಕಾರಿ ಧನಂಜಯ, ಅ.ಭಾ.ವೀ.ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ವರ್ತಕ ಐಗಳ್ ರುದ್ರೇಶ್, ನಿವೃತ್ತ ಡಿ.ವೈ.ಎಸ್.ಪಿ. ಸೈಯದ್ ಇಸಾಕ್, ಹಿರಿಯ ವಕೀಲ ಫಾತ್ಯರಾಜನ್, ರಂಗಸೌರಭ ಕಲಾ ಸಂಘದ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಹಾಗೂ ಜ್ಞಾನವಿಜ್ಞಾನ ಸಮಿತಿಯ ಡಾ.ಹೆಚ್.ಕೆ.ಎಸ್.ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕ ಸತೀಶ್‍ಕುಮಾರ್ ಜಟ್ಟಿ ಪ್ರಾರ್ಥಿಸಿದರು, ಕೆ.ಎಂ.ಎಸ್.ಪಿ.ಯು ಕಾಲೇಜಿನ ಪ್ರಾಚಾರ್ಯ ಜಿ.ಎನ್.ವೀರೇಶ್ ಸ್ವಾಗತಿಸಿದರು. ಸಹಶಿಕ್ಷಕಿ ಎಸ್.ಜೆ.ರಾಜೇಶ್ವರಿ ವಂದಿಸಿದರು. ಕೊನೆಯಲ್ಲಿ ಲಿಂಗದೇವರು ಹಳೆಮನೆ ರಚಿಸಿದ ಗಡಿಯಂಕ ಕುಡಿಮುದ್ದ ನಾಟಕವು ಆರ್.ಜಗದೀಶ್ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ಕಲಾವಿದರು ಅಭಿನಯಿಸಿದರು ಹಾಗೂ ಹೆಚ್.ಎಸ್.ದ್ಯಾಮೇಶ್ ವಿರಚಿತ ವಸುಂಧರೆ ನಾಟಕವನ್ನು ವೈ.ಡಿ.ಬದಾಮಿ ನಿರ್ದೇಶನದಲ್ಲಿ ಮಂಜುಳ ಬದಾಮಿ ಏಕವ್ಯಕ್ತಿ ರಂಗ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಮಂಜುಳ ವೈ.ಡಿ.ಬದಾಮಿ ದಂಪತಿಗಳನ್ನು ಸನ್ಮಾನಿಸಲಾಯಿತು.