ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಮುಖಂಡರು ಕರ್ನಾಟಕ ಬಂದ್ ಮಾಡಿದ್ದರು. ಆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಸಾಫ್ಟ್ ಹಿಂದುತ್ವ ಹಾರ್ಡ್ ಹಿಂದುತ್ವ ಅಂತ ಅಲ್ಲ. ನಾವೂ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ಕೊಡುತ್ತೇವೆ. ಅಸಮಾಧಾನ ಇರೋರು ಬಂದ್ ಮಾಡಿದ್ದಾರೆ. ಕೋರ್ಟ್ ನಿರ್ಧಾರ ವಿರೋಧ ಮಾಡಬಾರದು. ಹೈಕೋರ್ಟ್, ಸುಪ್ರೀಂ ತೀರ್ಪನ್ನ ಗೌರವಿಸಬೇಕು. ಪಾಲಿಸಬೇಕು. ಯಾವ ಧರ್ಮದವರಾಗಲಿ ಕೋಮುವಾದ ಮಾಡವಾರದು. ಹಿಂದು ಆಗಲಿ, ಮುಸ್ಲಿಂ ಆಗಲಿ, ಕ್ರೈಸ್ತರಾಗಲಿ ಕುವಾದ ಮಾಡಬಾರದು. ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣಬೇಕು ಎಂದಿದ್ದಾರೆ.
ಸದ್ಯ ರಾಜ್ಯ ರಾಜಕೀಯದಲ್ಲಿ ದಿ ಕಾಶ್ಮೀರ್ ಫೈಲ್ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಎಲ್ಲರೂ ಸಿನಿಮಾಗಳನ್ನ ನೋಡುತ್ತಿದ್ದಾರೆ. ಆ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಸಿನಿಮಾ ಮಾಡಿ ತೋರಿಸಿದ್ರೆ ಬೇಡ ಅಂತೀವಾ. ಆದ್ರೆ ಜನರಿಗೆ ಸತ್ಯ ತೋರಿಸಬೇಕು. ಕಾಶ್ಮೀರದಲ್ಲಿ ಪಂಡಿತರ ಜೊತೆಗೆ ಬೇರೆಯವರಿಗೂ ಯಾವ ತೊಂದರೆ ಆಯ್ತು ಅಂತ ತೋರಿಸಬೇಕು. ಆ ಕಾಲದಲ್ಲಿ ಯಾವ ಸರ್ಕಾರ ಇತ್ತು ಅನ್ನೋದನ್ನು ತೋರಿಸಬೇಕು. ಹಾಗೇ ಗುಜರಾತ್, ಲಂಖಿಪುರದಲ್ಲಿ ನಡೆದಿದ್ಯಲ್ಲ ಅದನ್ನು ತೋರಿಸಬೇಕು. ಬಹಳ ಸಿನಿಮಾಗಳನ್ನ ನೋಡಲ್ಲ ಹಾಗೇ ಇದನ್ನು ನೋಡಲ್ಲ ಎಂದಿದ್ದಾರೆ.
ಇನ್ನು ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಬಗ್ಗೆ ಮಾತನಾಡಿದ್ದು, ನೈತಿಕ ವಿದ್ಯೆ ಕಲಿಸೋಕೆ ನಮ್ಮ ತಕರಾರಿಲ್ಲ. ಭಗವದ್ಗೀತೆ ಆದ್ರೂ ಹೇಳಿಕೊಡ್ಲಿ, ಕುರಾನ್ ಆದರೂ ಹೇಳಿಕಿಡ್ಲಿ, ಬೈಬಲ್ ಆದ್ರೂ ಹೇಳಿಕೊಡ್ಲಿ. ಫೈನಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಾರ್ಕೆಟ್ ಗೆ ಅನುಗುಣವಾಗಿ ಅವರಿಗೆ ಕ್ವಾಲಿಟಿ ಶಿಕ್ಷಣ ಕೊಡ್ಲಿ.
ಭಗವದ್ಗೀತೆ ಸೇರಿಸುವ ಬಗ್ಗೆ ಸರ್ಕಾರ ಏನು ತೀರ್ಮಾನ ಮಾಡಿಲ್ಲ. ಭಗವದ್ಗೀತೆ ಯನ್ನ ಮನೆಯಲ್ಲಿ ಹೇಳಿ ಕೊಡಲ್ವಾ. ರಾಮಾಯಣ ಮಹಾಭಾರತ ಎಲ್ಲವನ್ನು ಮನೆಯಲ್ಲಿ ಹೇಳಿ ಕೊಡ್ತಾರೆ. ನಾಟಕಗಳನ್ನು ಆಡ್ತಾರೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಅಷ್ಟೆ ಎಂದಿದ್ದಾರೆ.