Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ವಿರುದ್ಧ ಅಕ್ರಮ ಆಸ್ತಿ ಆರೋಪ: ಸಮಗ್ರ ತನಿಖೆಗೆ ಎಂ ಸತೀಶ್ ಕುಮಾರ್ ಆಗ್ರಹ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಚಿತ್ರದುರ್ಗ : ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರರವರ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಬಂಜಾರ(ಲಂಬಾಣಿ) ಸಮಾಜದ ಅಧ್ಯಕ್ಷ ಎಂ.ಸತೀಶ್‍ಕುಮಾರ್ ಆಗ್ರಹಿಸಿದರು.

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೂರುವರೆ ಕೋಟಿ ರೂ.ಗಳಿಗೆ ಯಾವುದೆ ಓಚರ್ ಇಟ್ಟಿಲ್ಲ. ಆಸ್ಪತ್ರೆಯ ವೈದ್ಯರು
ನರ್ಸ್‍ಗಳು ಹಾಗೂ ಸಿಬ್ಬಂದಿಗಳನ್ನು ಸ್ವಂತ ಆಸ್ಪತ್ರೆಗಳಿಗೆ ಬಳಸಿಕೊಳ್ಳುತ್ತಿರುವ ಡಾ.ಎಸ್.ಪಿ.ರವೀಂದ್ರ ಚಳ್ಳಕೆರೆ ರಸ್ತೆಯಲ್ಲಿ ನೂರು ಹಾಸಿಗೆಗಳುಳ್ಳ ಅಕ್ಷಯ ಗ್ಲೋಬಲ್ ಆಸ್ಪತ್ರೆ ಕಟ್ಟಿಸಿದ್ದಾರೆ. ನರ್ಸಿಂಗ್ ಕಾಲೇಜು, ಜಮೀನು, ಮನೆ, ಹೀಗೆ ಸಂಬಂಧಿಕರ ಹೆಸರಿನಲ್ಲಿ ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ. ಮಂಜುಳ, ಶ್ರೀನಿವಾಸ್, ಪವಿತ್ರ, ಸುಶ್ಮಿತ ಇವರುಗಳು ಜಿಲ್ಲಾಸ್ಪತ್ರೆಯ ನೌಕರರೆ ಅಲ್ಲ. ಅವರ ಹೆಸರಿನಲ್ಲಿ ವೇತನ ಡ್ರಾ ಆಗುತ್ತಿದೆ. ಸರ್ಕಾರಿ ಹಣ ದುರುಪಯೋಗ, ಅಕ್ರಮ ಟೆಂಡರ್, ಬೋಗಸ್ ಬಿಲ್‍ಗಳ ಕುರಿತು ಸಂಪೂರ್ಣ ತನಿಖೆ ನಡೆಸಿ ಆದಾಯಕ್ಕಿಂತ ಅಧಿಕವಾಗಿ ಸಂಪಾದಿಸಿರುವ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆ ಎಂ.ಸತೀಶ್‍ಕುಮಾರ್ ಆಗ್ರಹಿಸಿದರು.

ಆರು ತಿಂಗಳ ಹಿಂದೆ ಚಿತ್ರದುರ್ಗದಲ್ಲಿಯೇ ಕರ್ತವ್ಯ ನಿರ್ವಹಿಸುವಾಗ ಅಮಾನತ್ತುಗೊಂಡಿದ್ದ ಡಾ.ಎಸ್.ಪಿ.ರವೀಂದ್ರ ರಾಜಕೀಯ ಪ್ರಭಾವ ಬೀರಿ ಮತ್ತೆ ಚಿತ್ರದುರ್ಗ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್.ಗಿರೀಶ್ ಮಾತನಾಡಿ ಕರ್ತವ್ಯ ಲೋಪ, ಅಕ್ರಮ ಆಸ್ತಿ ಸಂಪಾದನೆ, ದುರ್ನಡತೆ ವಿರುದ್ದ ಡಾ.ಎಸ್.ಪಿ.ರವೀಂದ್ರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಲೋಕಾಯುಕ್ತ ಎಸ್‍ಪಿ, ಎಡಿಜಿಪಿ.ಗೆ ದೂರು ಸಲ್ಲಿಸಿದ್ದೇವೆ. ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಚಳ್ಳಕೆರೆ ರಸ್ತೆಯಲ್ಲಿರುವ ಅಕ್ಷಯ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸುತ್ತಿದ್ದಾರೆ. ಕೈಕೆಳಗಿನ ಸಿಬ್ಬಂದಿಗಳಿಗೆ ಕಿರುಕುಳವಿದೆ. ಜಿಲ್ಲಾಸ್ಪತ್ರೆಗೆ ಬರುವ ಯಂತ್ರೋಪಕರಣಗಳನ್ನು ಸ್ವಂತ ಆಸ್ಪತ್ರೆಯಲ್ಲಿ ಬಳಸಿಕೊಳ್ಳುತ್ತಿರುವ ಆರೋಪಗಳಿವೆ. ಆರು ತಿಂಗಳ ಹಿಂದೆ ಚಿತ್ರದುರ್ಗದಲ್ಲಿ ಶಸ್ತ್ರಚಿಕಿತ್ಸಕರಾಗಿದ್ದ ಡಾ.ಎಸ್.ಪಿ.ರವೀಂದ್ರ ತನ್ನ ಪ್ರಭಾವ ಬಳಸಿ ಮತ್ತೆ ಇಲ್ಲಿಗೆ ಆಗಮಿಸಿರುವುದನ್ನು ಗಮನಿಸಿದರೆ ಸರ್ಕಾರದ ನಿಯಮ ಕೂಡ ಉಲ್ಲಂಘನೆಯಾಗಿದೆ ಎನ್ನುವುದರಲ್ಲಿ ಅನಮಾನವಿಲ್ಲ ಎಂದು ಆಪಾದಿಸಿದರು.

ಮಂಜುನಾಯ್ಕ, ಚೇತನ್‍ಕುಮಾರ್‍ನಾಯ್ಕ, ಹಾಲೇಶ್, ಶಿವಕುಮಾರ್, ಪ್ರಶಾಂತ್‍ನಾಯ್ಕ, ಯಶವಂತ್, ಗುರುರಾಜ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now