Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಗಮನಸೆಳೆದ ಪರಿಸರ ಸ್ನೇಹಿ ಗೃಹಪ್ರವೇಶ : ಪ್ಲಾಸ್ಟಿಕ್ ಮುಕ್ತ ನೈಸರ್ಗಿಕ ಸಂಭ್ರಮಕ್ಕೆ ಸಜ್ಜಾದ ‘ಕಲ್ಪಶ್ರೀ ನಿಲಯ’

---Advertisement---

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ಇತ್ತೀಚಿನ ದಿನಗಳಲ್ಲಿ ಶುಭ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಲ್ಲೊಂದು ಕುಟುಂಬ ನಗರಸಭೆ ಹಾಗೂ ಪರಿಸರ ಇಲಾಖೆಯ ಸಹಯೋಗದೊಂದಿಗೆ ಸಂಪೂರ್ಣ ಪರಿಸರ ಸ್ನೇಹಿ ಹಾಗೂ ಪ್ಲಾಸ್ಟಿಕ್ ಮುಕ್ತ ಮಾದರಿಯಲ್ಲಿ ಗೃಹಪ್ರವೇಶ ನೆರವೇರಿಸಲು ಮುಂದಾಗಿ ಮಾದರಿಯಾಗಿದೆ.

ಚಿತ್ರದುರ್ಗದ ಗೋಪಾಲಪುರ ರಸ್ತೆಯ ನಿವಾಸಿಗಳಾದ ಶ್ರೀಮತಿ ಕೆ.ಜಿ. ಮಂಜುಳಾ ಮತ್ತು ಶ್ರೀ ವಿಠ್ಠಲರಾವ್ ಖೋಕಲೆ ಕುಟುಂಬದವರು ತಮ್ಮ ನೂತನ ಮನೆ ‘ಕಲ್ಪಶ್ರೀ ನಿಲಯ’ದ ಗೃಹಪ್ರವೇಶವನ್ನು ಪರಿಸರ ಜಾಗೃತಿಯೊಂದಿಗೆ ಆಯೋಜಿಸಿದ್ದಾರೆ. ನಗರಸಭೆಯ ಪರಿಸರ ಇಂಜಿನಿಯರ್ ಜಾಫರ್ ಮತ್ತು ಆರೋಗ್ಯ ನಿರೀಕ್ಷಕರಾದ ರುಕ್ಮಿಣಿ,  ಹಾಗೂ ಪರಿಸರ ಇಲಾಖೆ ರಾಜೇಶ್ ಇವರ ಸಹಯೋಗದಲ್ಲಿ ಪ್ಲಾಸ್ಟಿಕ್ ಮುಕ್ತ ನೈಸರ್ಗಿಕ ವಿಧಾನದ ಮೂಲಕ ಇಡೀ ಕಾರ್ಯಕ್ರಮವನ್ನು ವಿಶಿಷ್ಟವಾಗಿ ನಡೆಸಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಇದೇ ರೀತಿಯಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಅಯೋಜಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಪರಿಸರ ಸ್ನೇಹಿ ಗೃಹಪ್ರವೇಶ ಕಾರ್ಯಕ್ರಮವು ದಿನಾಂಕ 22-11-2026ನೇ ಭಾನುವಾರ ಬೆಳಿಗ್ಗೆ 5-15 ರಿಂದ 6-38 ರವರೆಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ನೆರವೇರಲಿದೆ. ಸಮಾರಂಭವು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯಲ್ಲಿರುವ, ಹಳೇ ಬಡಾವಣೆ ಪೊಲೀಸ್ ಠಾಣೆ ಹಾಗೂ ಅಬಕಾರಿ ಇಲಾಖೆಯ ಪಕ್ಕದ ಬ್ಯಾಂಕ್ ಕಾಲೋನಿ, ಶಂಕರಲಾಲ್ ಲೇಔಟ್ನ ‘ಕಲ್ಪಶ್ರೀ ನಿಲಯ’ದಲ್ಲಿ ಜರುಗಲಿದೆ.

ಹೊಳಲ್ಕೆರೆಯ ದಂತ ವೈದ್ಯರಾದ ಡಾ. ಸಂತೋಷ್ ಕೆ.ವಿ., (Mob : 93424 66936) ಶ್ರೀಮತಿ ಅಶ್ವಿನಿ ಎನ್.ಎಸ್ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ನಿಟ್ಟಿನಲ್ಲಿ ಈ ವಿನೂತನ ಹೆಜ್ಜೆ ಇಟ್ಟಿದ್ದಾರೆ. ಆಹ್ವಾನ ಪತ್ರಿಕೆಯಲ್ಲೇ ಪ್ಲಾಸ್ಟಿಕ್ ಮುಕ್ತ ನೈಸರ್ಗಿಕ ಆಚರಣೆಯನ್ನು ಪ್ರಕಟಿಸಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now