ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 13 : ಶಿಕ್ಷಣದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಅಶೋಕ್ ಎನ್. ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷವೂ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ಸ್ಪರ್ಧೆಯನ್ನು ಈ ಬಾರಿ ತಾಲ್ಲೂಕು ಮಟ್ಟದಲ್ಲಿಯೂ ಆಯೋಜಿಸಲಾಗಿದೆ. ಇಲ್ಲಿ ಆಯ್ಕೆಯಾದವರನ್ನು ಜಿಲ್ಲಾ ಮಟ್ಟಕ್ಕೆ ಕಳಿಸಲಾಗುವುದು. ಜಾನಪದ, ಭಕ್ತಿಗೀತೆ, ಭಾವಗೀತೆ, ಜಾನಪದ ನೃತ್ಯ, ಕೋಲಾಟ, ಸೋಬಾನೆ ಪದ ಇವುಗಳೆಲ್ಲವೂ ನಶಿಸಿ ಹೋಗುತ್ತಿರುವುದು ನೋವಿನ ಸಂಗತಿ.
ಹಿಂಜರಿಕೆಯಿಲ್ಲದೆ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಿ. ಆಗ ಕಲೆಗೆ ಪ್ರೋತ್ಸಾಹ ಸಿಗುತ್ತದೆಂದು ಹೇಳಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗಲಿದೆ. ಬುಡಕಟ್ಟು ಸಂಸ್ಕøತಿಯನ್ನು ಕಡೆಗಣಿಸಬೇಡಿ. ಯಾವುದೇ ಸ್ಪರ್ಧೆಯಾಗಲಿ ಸೋಲು-ಗೆಲುವು ಮುಖ್ಯವಲ್ಲ. ಎರಡನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಣ್ಣಪಾಲಯ್ಯ ಮಾತನಾಡುತ್ತ ಕಲೆಗೆ ಎಲ್ಲಾ ಕಾಲದಲ್ಲಿಯೂ ಬೆಲೆಯಿದೆ. ಕಲೆಯನ್ನು ಕೇಳುವ ಆಸ್ವಾದಿಸುವ ಮನಸ್ಸುಗಳಿರಬೇಕು. ಮುಂದಿನ ವರ್ಷ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನೀಡಿದರೆ ಎಲ್ಲರ ಸಹಕಾರ ಪಡೆದು ಯಶಸ್ವಿಯಾಗಿ ನಡೆಸಿಕೊಡುತ್ತೇನೆಂದು ಭರವಸೆ ನೀಡಿದರು.
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ದೊಡ್ಡಯ್ಯ ಮಾತನಾಡಿ ಸಂಸ್ಕøತಿ ಸಂಪ್ರದಾಯದ ದೇಶ ನಮ್ಮದು. ಅನೇಕ ಬಗೆಯ ನೃತ್ಯಗಳು ಭಾರತದಲ್ಲಿರುವುದರಿಂದ ಜಗತ್ತು ನಮ್ಮ ದೇಶದ ಕಡೆ ತಿರುಗಿ ನೋಡುತ್ತಿದೆ. ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್ರಂತಹ ಮಹಾನ್ ಪುರುಷರನ್ನು ಕೊಟ್ಟ ದೇಶದ ನಮ್ಮದು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತರಲು ಇಂತಹ ಸ್ಪರ್ಧೆಗಳು ಮುಖ್ಯ ಎಂದರು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡುತ್ತ ಪಠ್ಯದ ಹುಳುಗಳಾಗದೆ ಪಠ್ಯೇತರ ಚಟುವಟಿಕೆಗಳ ಕಡೆ ಆಸಕ್ತಿ ಬೆಳೆಸಿಕೊಳ್ಳಿ. ತಾಲ್ಲೂಕು ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲ್ಲುಕು, ಜಿಲ್ಲೆ, ವಿಭಾಗ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉಪನ್ಯಾಸಕ ತಿಪ್ಪೇಸ್ವಾಮಿ ಮಾತನಾಡಿ ಪ್ರತಿ ವರ್ಷ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯುತ್ತಿತ್ತು. ಈ ಸಾರಿ ತಾಲ್ಲೂಕು ಮಟ್ಟದಲ್ಲಿಯೂ ನಡೆಯುತ್ತಿರುವುದು ಸಂತೋಷದ ಸಂಗತಿ. ಪಾಠದಷ್ಟೆ ಸಾಂಸ್ಕøತಿಕ ಸ್ಪರ್ಧೆಗಳಿಗೆ ಪ್ರಾಮುಖ್ಯತೆ ಕೊಡಬೇಕು. ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯುವವರಷ್ಟೆ ಪ್ರತಿಭಾವಂತರಲ್ಲ. ಪ್ರತಿಭೆಯನ್ನು ಗುರುತಿಸಲು ಸ್ಪರ್ಧೆಗಳು ಸಹಕಾರಿಯಾಗಲಿವೆ. ಸ್ಪರ್ಧೆಯಲ್ಲಿ ದ್ವೇಷವಿರಬಾರದು. ತೀರ್ಪುಗಾರರು ನ್ಯಾಯಯುತವಾದ ತೀರ್ಪು ನೀಡಬೇಕೆಂದು ಮನವಿ ಮಾಡಿದರು.

ಉಪನ್ಯಾಸಕ ಮಲ್ಲೇಶಪ್ಪ ಮಾತನಾಡುತ್ತ ವಿದ್ಯಾರ್ಥಿಗಳ ವಿಕಸನಕ್ಕೆ ಇಂತಹ ಸ್ಪರ್ಧೆಗಳ ಅವಶ್ಯಕತೆಯಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳಲಿದೆ ಎಂದು ನುಡಿದರು.
ಉಪ ಪ್ರಾಂಶುಪಾಲರಾದ ಕರಿಯಪ್ಪ, ಉಪನ್ಯಾಸಕರುಗಳಾದ ಬುಡೇನ್ಸಾಬ್, ಷಡಾಕ್ಷರಪ್ಪ, ವೆಂಕಟೇಶ್ರೆಡ್ಡಿ, ಮಂಜುನಾಥ್, ಶಿವಕುಮಾರ್, ಶ್ರೀನಿವಾಸ್ ಇವರುಗಳು ವೇದಿಕೆಯಲ್ಲಿದ್ದರು. ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ವಸಂತಕುಮಾರ್ ಸ್ವಾಗತಿಸಿದರು. ಪೆನ್ನಯ್ಯ ವಂದಿಸಿದರು. ರಾಜಭಕ್ಷಿ ನಿರೂಪಿಸಿದರು.












