ಹುಬ್ಬಳ್ಳಿ: ಅಪೂರ್ವ ಪುರಾಣಿಕ್ ಎಂಬ ಯುವತಿ ಮುಸ್ಲಿಂ ಹುಡುಗನನ್ನು ಮದುವೆಯಾದ ಬಳಿಕ ಆಕೆಯ ಪತಿಯೇ ಬರ್ಬರವಾಗಿ ಹಲ್ಲೆ ನಡೆಸಿದ್ದ. ಇದಾದ ಬಳಿಕ ಹುಷಾರಾಗಿರುವ ಅಪೂರ್ವ ಇದೀಗ ಆಕೆಯ ಪತಿ ಮೇಲೆ ಲವ್ ಜಿಹಾದ್ ಸಂಬಂಧ ನೇರ ಆರೋಪ ಮಾಡಿದ್ದಾರೆ.
ಲವ್ ಜಿಹಾದ್ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಕೈಮುಗಿದು ಕೇಳಿಕೊಳ್ತೇನೆ. ದಯವಿಟ್ಟು ರಾಜ್ಯದಲ್ಲಿ ಲವ್ ಜಿಹಾದ್ ಗೆ ಕಡಿವಾಣ ಹಾಕಿ ಎಂದು ಮನವಿ ಮಾಡಿದ್ದಾರೆ. ಹೆಣ್ಣು ಮಕ್ಕಳು ಪ್ರೀತಿ ಹೆಸರಲ್ಲಿ ಮೋಸ ಹೋಗುತ್ತಿದ್ದಾರೆ. ನಾನು ವಿದ್ಯಾಭ್ಯಾಸಕ್ಕಾಗಿ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ ಅದನ್ನೇ ದುರುಪಯೋಗ ಪಡಿಸಿಕೊಂಡ ಎಂದ ಅಳಲು ತೋಡಿಕೊಂಡಿದ್ದಾರೆ.
ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ. ಇದರಿಂದ ಅನಿವಾರ್ಯವಾಗಿ ನಾನು ಮದುವೆಯಾಗೋದಕ್ಕೆ ಒಪ್ಪಿಕೊಂಡೆ. ಆ ಬಳಿಕ ಮತಾಂತರ ಆಗಬೇಕು ಅಂತ ಬಲವಂತ ಮಾಡಿದ. ಅನಿವಾರ್ಯತೆಯಿಂದ ಮತಾಂತರಗೊಂಡೆ. ಹಿಜಾಬ್ ಹಾಕು ಬುರ್ಕಾ ಹಾಕು ಅಂತ ಬಲವಂತ ಮಾಡ್ತಿದ್ದ. ನನ್ನ ಹೆಸರನ್ನಹ ಬದಲಾಯಿಸಿದ. ನಮಾಜ್ ಮಾಡಲು ಹೇಳ್ತಿದ್ದ, ನಾನ್ ವೆಜ್ ತಿನ್ನಲು ಬಲವಂತ ಮಾಡ್ತಿದ್ದ ಎಂದಿದ್ದಾರೆ.