ಧಾರವಾಡ: ನಿನ್ನೆಯಷ್ಟೇ ಹಿಜಾಬ್ ಗೆ ಸಂಬಂಧಿಸಿದ ಕೋರ್ಟ್ ತೀರ್ಪು ಹೊರ ಬಿದ್ದಿದೆ. ಆದ್ರೆ ಕೆಲವು ಕಡೆ ಹಿಜಾಬ್ ಧರಿಸಿದೇ ಪರೀಕ್ಷೆಯನ್ನೇ ಬರೆಯಲ್ಲ ಅಂತ ಕೆಲವೊಂದಿಷ್ಟು ವಿದ್ಯಾರ್ಥಿಗಳು ಹಠ ಮಾಡಿದ್ದಾರೆ. ಇನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಸ್ಲಿಂ ಮುಖಂಡ ಅತಾವುಲ್ಲಾ ಮೇಲೆ ಗರಂ ಆಗಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಅತಾವುಲ್ಲಾ ಎಂಬಾತ ಬಹಳ ಅವಹೇಳನಕಾರಿಯಾಗಿ ತನ್ನದೇ ರಾಜ್ಯ, ತನ್ನದೇ ಎಲ್ಲಾ ಎಂಬ ಸೊಕ್ಕಿನಿಂದ ಮಾತನಾಡಿದ ಅತಾವುಲ್ಲ ಕೋರ್ಟ್ ಆಜ್ಞೆ ಉಲ್ಲಂಘನೆ ಮಾಡಿದ್ದಾನೆ. ಹಿಜಾಬ್ ತೀರ್ಪು ಮೂರು ಜಡ್ಜ್ ಗಳ ತೀರ್ಪು ಮೂರು ಗಂಟೆಯಲ್ಲಿ ಕೊಟ್ಟ ತೀರ್ಪಲ್ಲ. ಕುರಾನ್ ಅಧ್ಯಯನವನ್ನು ಮಾಡಿ, ವಾರಾನುಗಟ್ಟಲೇ ಚರ್ಚೆ ನಡೆಸಿ ತೀರ್ಪು ನೀಡಿರುವುದು. ಇದಕ್ಕೆ ಅವಹೇಳನ ಮಾಡಿರುವುದು ಶ್ರಿರಾಮ ಸೇನೆ ಸಂಘಟನೆಯಿಂದ ಅವನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಹಿಜಾಬ್ ಸಂಬಂಧಿಸಿದಂತೆ ತೀರ್ಪು ಬಂದಿದೆ. ಇದಕ್ಕೆ ಅಪೀಲು ಹೋಗೋ ಅವಕಾಶ ಇದೆ. ಆದ್ರೆ ಆ ತೀರ್ಪಿಗೆ ಸಂಬಂಧಿಸಿದಂತೆ ಕೆಲವರು ಅವಹೇಳನವಾಗಿ ಮಾತನಾಡಿದ್ದಾರೆ. ಕೋರ್ಟ್ ಗೆ ಹೋಗಿದ್ದ ಆ ಆರು ಜನ ಹುಡುಗಿಯರು ಪ್ರೆಸ್ ಮೀಟ್ ಮಾಡಿ, ಜಡ್ಜ್ ಗಳನ್ನ ಗೌರವಿಸದೆ, ಕೋರ್ಟ್ ಗೆ ಅವಮಾನ ಆಗುವ ರೀತಿ ಮಾತಾಡಿದ್ದಾರೆ.
ಸಂವಿಧಾನ ಆಧಾರದ ಮೇಲೆ ಎಲ್ಲವೂ ಇರುತ್ತೆ. ಅಪೀಲ್ ಹೋಗಿ ಅಲ್ಲಿ ಮಾತಾಡಿ. ಅದನ್ಜ ಬಿಟ್ಟು ಹೊರಗಡೆ ಈ ರೀತಿ ಮಾತನಾಡುವುದು ಸರಿಯಲ್ಲ. ಜಡ್ಜ್ ಗಳ ಮೇಲೆಯೇ ಹೌಹಾರಿದ್ದಾರೆ. ಅವರಿಗೆ ಬುದ್ಧಿ ಇಲ್ಲ ಎಂಬಂತೆ ಮಾತಾಡಿದ್ದಾರೆ. ಇದೆಲ್ಲಾ ವಿಡಿಯೋಗಳನ್ನು ತರಿಸಿಕೊಂಡು ಆ ಹುಡುಗಿಯರ ಮೇಲೆಯೂ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇವೆ.