ಬೆಂಗಳೂರು: ಇಂದು ಖ್ಯಾತ ನಿರ್ದೇಶಕ, ನಟ ಎಸ್ ನಾರಾಯಣ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಸ್ ನಾರಾಯಣ್, ನಾನು ಚಿತ್ರರಂಗಕ್ಕೆ ಬಂದಾಗಲೂ ಎಲ್ಲವೂ ಹೊಸದಾಗಿತ್ತು. ಮಾಡ್ತಾ ಮಾಡ್ತಾ ಕೆಲಸ ಕಲಿತೆ. ಹೀಗಾಗಿ ಶ್ರದ್ಧೆ, ಶ್ರಮ ಇದ್ರೆ ಎಲ್ಲಾ ಕಡೆ ಗೆಲ್ತೀವಿ ಅನ್ನೋದು ನಂಬಿಕೆ. ನಮ್ಮ ಕೆಲಸ ಏನಿದೆ ಅದನ್ನ ನಾವೂ ಮಾಡ್ತಾ ಹೋಗಬೇಕು. ಫಲ ದೇವರಿಗೆ ಬಿಟ್ಟಿದ್ದು. ಸದ್ಯಕ್ಕೆ ಕಾರ್ಯಕರ್ತನಾಗಿ ಸೇರಿಕೊಂಡಿದ್ದೇನೆ. ಯಾವ ರೀತಿ ಜವಬ್ದಾರಿ ಕೊಡ್ತಾರೆ ಅದನ್ನ ನಿರ್ವಹಿಸಿಕೊಂಡು ಹೋಗ್ತೇನೆ ಎಂದಿದ್ದಾರೆ.
ಇನ್ನು ಎಸ್ ನಾರಾಯಣ್ ಅವರನ್ನ ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿರುವ ಡಿ ಕೆ ಶಿವಕುಮಾರ್, ಎಸ್ ನಾರಾಯಣ್ ಅವರು ಬಹುಮುಖ ಪ್ರತಿಭೆ, ಸರಳ ವ್ಯಕ್ತಿತ್ವ ಹೊಂದಿರುವವರು. ಪಕ್ಷದ ಸಿದ್ಧಾಂತಗಳನ್ನ ಒಪ್ಪಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದಿದ್ದಾರೆ.