ಬೆಂಗಳೂರು: ಇಂದು ಬಜೆಟ್ ಮೇಲಿನ ಚರ್ಚೆ ವೇಳೆ ರಮೇಶ್ ಕುಮಾರ್ ಅವರು ಮಾತನಾಡುವಾಗ ಸದ್ದು ಗದ್ದಲ ಬರುತ್ತಿತ್ತು. ಮೊದಲು ಮಾತನಾಡೋದಕ್ಕೆ ಬಿಡಿ ಎಂದು ರಮೇಶ್ ಕುಮಾರ್ ಕೇಳಿ ಮಾತು ಮುಂದುವರೆಸಿದ್ದಾರೆ.
ಮಾಧುಸ್ವಾಮಿ ಯಾಕಿಂಗೆ ಆಕ್ಷೇಪ ಮಾಡ್ತಿದ್ದಾರೆ ಗೊತ್ತಿಲ್ಲ. ನಮ್ಮ ನಿಯಮಾವಳಿಗಳು ಪದ್ದತಿ, ಸಾಂಪ್ರದಾಯವನ್ನ ಗಮನದಲ್ಲಿಟ್ಟುಕೊಳ್ಳಬೇಕು. ವರ್ಷದ ಚಟುವಟಿಕೆ ಪ್ರಾರಂಭ ಮಾಡಿದಾಗ ಗವರ್ನರ್ ಅಡ್ರೆಸ್ ಮಾಡಬೇಕು ಅದಾದ ಮೇಲೆ ಬಜೆಟ್ ಶುರು ಮಾಡಬೇಕು. ಇದು ನಮಗೆ ತುಂಬಾ ಹರ್ಟ್ ಮಾಡಿದೆ.
ಡಿಮ್ಯಾಂಡ್ಸ್ ಬಂದಾಗ ನೀವ್ ಹೇಳೋದನ್ನ ಒಪ್ಪುತ್ತೇವೆ. ನಾವಿಲ್ಲಿ ಬಂದು ನಿಲ್ಲಬೇಕಾದರೆ ತರಬೇತಿ ಇಲ್ಲದೆ, ತಯಾರಿ ಇಲ್ಲದೆ, ಅಧ್ಯಯನ ಇಲ್ಲದೆ ಬರೋದೆ ಇಲ್ಲ. ಇಲ್ಲಿ ಏನಾಗಿದೆ ಅಂದ್ರೆ ಎಲ್ಲಾ ಒಂದೇ ಆಗೋಗಿದೆ. ಶೂನ್ಯವೇಳೆ ಗೊತ್ತಿಲ್ಲ, ಪ್ರಶ್ನೋತ್ತರ ಗೊತ್ತಿಲ್ಲ, ಬಜೆಟ್ ಚರ್ಚೆ ವೇಳೆ ಗೊತ್ತಿಲ್ಲ. ಈಗ ನಾನು ಊರಿಂದ ಬಂದು ಬಿಟ್ಟಿದ್ದೀನಿ. ಈಗ ಎಲ್ಲಿ ಹೋಗಿ ಕೂತ್ಕೊಬೇಕು. ನಿಮ್ ನಿಮ್ಗೆ ಟೈಮ್ ಮುಖ್ಯ. ಹಾಗಾದ್ರೆ ಒಂದು ಕೆಲಸ ಮಾಡಿ ಒಂದ್ ನೋಟ್ ಕೊಟ್ಬಿಡಿ ಏನೇನ್ ಮಾತಾಡಬೇಕು ಅಂತ. ಅದೇ ರೀತಿ ಮಾತಾಡ್ತೀನಿ.
ಬಜೆಟ್ ನಲ್ಲಿ ಮಾತಾಡ್ತಾರೆ. ತಾವು ಏನ್ ಮಾಡಿದ್ದೀವಿ. ನೀವ್ ಏನ್ ಮಾಡ್ತಾ ಇದ್ದೀರಿ ಅಂತ ಮಾತಾಡೋ ಆಗಿಲ್ವಾ. ಹಿರಿಯರ ಹತ್ರ ಆದ್ರೂ ಕೇಳಿ ಜನರಲ್ ಬಜೆಟ್ ಚರ್ಚೆ ನಡೆಯುವಾಗ ಗವರ್ನರ್ಸ್ ಅಡ್ರೆಸ್ ಮೇಲೆ ಮಾಡಬೇಕು ಎಂದು ಹೇಳಿದಾಗ ಕಾಂಗ್ರೆಸ್ ನಾಯಕರು ಬೆಂಚ್ ಕುಟ್ಟಿ ಬೆಂಬಲ ಸೂಚಿಸಿದ್ದಾರೆ.