Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಮೀಣ ಮಹಿಳೆಯರಿಗೆ ಉಚಿತ ದೇಶಿ ಕೋಳಿಮರಿಗಳ ವಿತರಣೆಗೆ ಅರ್ಜಿ ಆಹ್ವಾನ

Post-matric scholarships, incentive grants, and hostel admission for Scheduled Caste students: Online applications invited
---Advertisement---

ದಾವಣಗೆರೆ : ಕರ್ನಾಟಕ ಕುಕ್ಕುಟ ಮಹಾ ಮಂಡಳಿ ನಿಯಮಿತ, ಬೆಂಗಳೂರು ಇವರ ವತಿಯಿಂದ 2026-27 ನೇ ಸಾಲಿಗೆ ದಾವಣಗೆರೆ ತಾಲ್ಲೂಕಿನ 99 ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ 5 ವಾರಗಳ ವಯಸ್ಸಿನ ದೇಶಿ ಕೋಳಿಮರಿಗಳನ್ನು ತಲಾ 20 ರಂತೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಮಹಿಳಾ ಫಲಾನುಭವಿಗಳು ನವೆಂಬರ್ 15 ರೊಳಗೆ ದಾವಣಗೆರೆ ತಾಲ್ಲೂಕಿನ ಪಶು ವೈದ್ಯ ಸಂಸ್ಥೆಗಳಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.

ಫಲಾನುಭವಿಗಳ ಆಯ್ಕೆಯನ್ನು ಪರಿಶಿಷ್ಟ ಜಾತಿ 17%, ಪರಿಶಿಷ್ಟ ಪಂಗಡ 7% , ಹಿಂದುಳಿದ ವರ್ಗ 32% , ಮತ್ತು ಸಾಮಾನ್ಯ ವರ್ಗ 44% ರಂತೆ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ದಾವಣಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈಧ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಂಜಾರ ಮಹಿಳೆಯರಿಗೆ ದೇಶಿ ಕೋಳಿಮರಿ ವಿತರಣೆ ಯೋಜನೆಗೆ ಅರ್ಜಿ ಅಹ್ವಾನ.

ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಗ್ರಾಮೀಣ ತಾಂಡಾ (ಬಂಜಾರ) ಮಹಿಳೆಯರಿಗಾಗಿ ಕರ್ನಾಟಕ ಕುಕ್ಕುಟ ಮಹಾಮಂಡಳ ನಿಯಮಿತ ಬೆಂಗಳೂರು ಇವರ ವತಿಯಿಂದ 2026-27 ನೇ ಸಾಲಿಗೆ ಉಚಿತವಾಗಿ ದೇಶಿ ಕೋಳಿಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ 93 ಗ್ರಾಮೀಣ ಬಂಜಾರ ಮಹಿಳೆಯರಿಗೆ ತಲಾ 20 ರಂತೆ 5 ವಾರಗಳ ವಯಸ್ಸಿನ ದೇಶಿ ಕೋಳಿಮರಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಆಸಕ್ತ ತಾಂಡಾ (ಬಂಜಾರ) ಮಹಿಳೆಯರು ಸೌಲಭ್ಯವನ್ನು ಪಡೆಯಲು ನವೆಂಬರ್ 15 ರೊಳಗೆ ದಾವಣಗೆರೆ ತಾಲ್ಲೂಕಿನ ಪಶು ವೈದ್ಯ ಸಂಸ್ಥೆಗಳಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ದಾವಣಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Join WhatsApp

Join Now

Join Telegram

Join Now