ಬೆಂಗಳೂರು: ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತೆ ಎಂಬ ಊಹಾಫೊಹಾಗಳು ಹರಿದಾಡುತ್ತಿವೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇವೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸರ್ಕಾರ ಚೆನ್ನಾಗಿಯೇ ಆಡಳಿತ ನಡೆಸುತ್ತಿದೆಯಲ್ವಾ..? ಹೀಗಿರುವಾಗ ಅವಧಿಗೂ ಮುನ್ನವೇ ಚುನಾವಣೆ ಯಾಕೆ ಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಶ್ನಿಸಿದ್ದಾರೆ.
ಚುನಾವಣೆ ಆದರೆ ಎದುರಿಸಲು ಸಿದ್ಧ, ಆದರೆ ಅದು ಅಷ್ಟು ಸುಲಭವಲ್ಲ. ಜೊತೆಗೆ ಚುನಾವಣೆಯಲ್ಲಿ ಯಶಸ್ವಿಯಾಗೋದು ಸುಲಭವಲ್ಲ. ಬಿ ಎಸ್ ಯಡಿಯೂರಪ್ಪ ಸಹ ಇದೇ ಮಾತನ್ನ ಹೇಳಿದ್ದಾರೆ.
ಕನ್ನಡಿಗ ಪ್ರಧಾನಿಯಾಗಿದ್ದನ್ನು ನೋಡಿ ಇವರಿಗೆ ಸಹಿಸಲು ಆಗಲಿಲ್ಲ. ನಾನು ಶಕ್ತಿ ಮೀರಿ ಪಕ್ಷ ಉಳಿಸುವ ಕೆಲಸ ಮಾಡುತ್ತೇನೆ. ಪ್ರಧಾನಿ ಮೋದಿ ನಿಷ್ಠೆಯಿಂದ ಚುನಾವಣೆ ಮಾಡುತ್ತಾರೆ. ನಾಲ್ಜು ದಿಕ್ಕಿನಿಂದಲೂ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸಿದ್ದಾರೆ. ಮೋದಿಯವರಿಗೆ ಇರುವ ಗುಣ ನಮ್ಮಲ್ಲೂ ಬರಬೇಕು.
ಮುಂದಿನ ಚುನಾವಣೆಯಲ್ಲಿ ಎರಡು ಪಕ್ಷಗಳ ವಿರುದ್ಧ ಅಭ್ಯರ್ಥಿ ಹಾಕಲಾಗುತ್ತೆ. ಬೇರೆ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂದಿದ್ದಾರೆ. ಇನ್ನು ಸಿ ಎಂ ಇಬ್ರಾಹಿಂ ಜೆಡಿಎಸ್ ಸೇರುವ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ಹಲವಯ ತಿಂಗಳಿನಿಂದ ಚರ್ಚೆ ನಡೆಯುತ್ತಲೆ ಇದೆ. ಆದರೇ ಈವರೆಗೆ ಸಿ ಎಂ ಇಬ್ರಾಹಿಂ ನನ್ನ ಜೊತೆ ಅಧಿಕೃತವಾಗಿ ಮಾತನಾಡಿಲ್ಲ ಎಂದಿದ್ದಾರೆ.