ಚಿತ್ರದುರ್ಗ,(ಮಾ.12) : ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಮನುವಾದಿಗಳು ಬುಡ ಮೇಲು ಮಾಡುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಅರಿವು ಇಲ್ಲದ ನಮ್ಮವರು ಸಹಾ ಇದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲರಾದ ಫ್ರೊ. ಸಿ.ಕೆ. ಮಹೇಶ್ವರಪ್ಪ ವಿಷಾಧಿಸಿದರು.
ದಲಿತ ಪರ ಸಂಘಟನೆಗಳ ಒಕ್ಕೂಟ ಚಿತ್ರದುರ್ಗ ಇವರ ವತಿಯಿಂದ ನಗರದ ಐ.ಎಂ.ಎ. ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‌ರವರ ಸಂವಿಧಾನ ಕುರಿತು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಸಂವಿಧಾನದ ಸೌಲಭ್ಯವನ್ನು ಪಡೆಯುವುದರ ಮೂಲಕ ಪ್ರಗತಿಯನ್ನು ಸಾಧಿಸಬೇಕಿದೆ.
ಸಂವಿಧಾನ ಇಲ್ಲದಿದ್ದರೆ ನಾವುಗಳು ಇಲ್ಲಿ ಇರಲಿಕ್ಕೆ ಆಗದಂತ ಪರಿಸ್ಥಿತಿ ನಿರ್ಮಾಣವಾಗುತ್ತಿತು. ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಶೇ.15ರಷ್ಟು ಇರುವ ಜನತೆ ಬದಲಾಯಿಸಲು ಹೊರಟಿದ್ದಾರೆ. ಇದರ ಬಗ್ಗೆ ಇಲ್ಲದ ಸಲ್ಲದೆ ಹೇಳಿಕೆಯನ್ನು ನೀಡುವುದರ ಮೂಲಕ ಉಳಿದ ಶೇ.85ರಷ್ಟಿ ಜನತೆಯನ್ನು ಒಪ್ಪುವಂತೆ ಮಾಡಿದ್ದಾರೆ. ಇದ್ನನ್ನೇ ನಂಬಿ ನಮ್ಮ ಜನತೆ ಮುನ್ನಡೆಯುತ್ತಿದ್ದಾರೆ ಎಂದರು.
ನಮ್ಮಲ್ಲಿನ ಆಸ್ತಿ, ಸಂಪತ್ತ ಅಧಿಕಾರವನ್ನು ಮನು ಸಂವಿಧಾನ ಹಂಚಿಕೆಯನ್ನು ಮಾಡದೇ ಒಂದು ಕಡೆಯಲ್ಲಿ ಕೇಂದ್ರಕೃತಗೂಳಿಸಿದೆ ಇದನ್ನು ಅರಿತ ಅಂಬೇಡ್ಕರ್ ಸಂವಿದಾನವನ್ನು ರಚನೆ ಮಾಡುವುದರ ಮೂಲಕ ಎಲ್ಲಾ ವರ್ಗದವರಿಗೂ ಸಿಗುವಂತೆ ರಚನೆಯನ್ನು ಮಾಡಿದ್ದಾರೆ. ಆದರೆ ಇದರ ಬಗ್ಗೆ ಅರಿವು ಇಲ್ಲದೆ ನಮ್ಮಲ್ಲಿ ಕೆಲವರು ಮನು ಸಂವಿಧಾನವನ್ನು ನಂಬಿಕೂಂಡು ನಡೆಯುತ್ತಿದ್ದಾರೆ. ಮನು ಸಂವಿಧಾನ ಬಡ ವರ್ಗದವರ ಆರ್ಥಿಕ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿದೆ. ಆದರೆ ಅಂಬೇಡ್ಕರ್ ಸಂವಿಧಾನ ಎಲ್ಲಾ ವರ್ಗದವರನ್ನು ಸಮಾನಾಗಿ ಕರೆದ್ಯೊಯುವ ಕಾರ್ಯವನ್ನು ಮಾಡುತ್ತಿದೆ ಎಂದು ಮಹೇಶ್ವರಪ್ಪ ತಿಳಿಸಿದರು.
ನಮ್ಮನ್ನಾಳುವ ಜನಪ್ರತಿನಿಧಿಗಳು ಸಹಾ ಅಂಬೇಡ್ಕರ್ ಸಂವಿಧಾನದ ಹೆಸರಿನಲ್ಲಿ ಮನು ಸಂವಿದಾನವನ್ನು ಜಾರಿ ಮಾಡುತ್ತಾ ಬಂದಿದ್ದಾರೆ. ದೇಶದ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿ ಮಾಡುವುದರ ಮೂಲಕ ಸಂವಿಧಾನದ ಮೂಲ ತತ್ವಗಳನ್ನೇ ಅಲುಗಾಡಿಸುತ್ತಿದ್ದಾರೆ. ಮೇಲ್ಜಾತಿಯವರ ಅರ್ಥ ವ್ಯವಸ್ಥೆಗಳು ನಮ್ಮ ಸಂವಿಧಾನದ ವಿರುದ್ದವಾಗಿದ್ದು ಮನುವಾದಿ ಪರವಾಗಿದೆ. ಅದರಂತೆ ಅವರು ನಡೆಯುತ್ತಿದ್ದಾರೆ. ಇದ್ದಲ್ಲದೆ ಮೇಲ್ಜಾತಿಯವರ ಅರ್ಥ ವ್ಯವಸ್ಥೆಯನ್ನು ಭದ್ರ ಮಾಡುವ ಮನು ಸಂವಿಧಾನ ಬೇರೆಯವರ ಅರ್ಥ ವ್ಯವಸ್ಥೇಯ ಬಗ್ಗೆ ತೆಲೆ ಕಡಿಸಿಕೊಂಡಿಲ್ಲ, ಇದರ ವಿರುದ್ದ ಯಾರು ಸಹಾ ಧ್ವನಿಯನ್ನು ಎತ್ತಲಾಗದೆ ಒಪ್ಪಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಈ ರೀತಿಯಾದ ಮಸೂದೆಗಳನ್ನು ಜಾರಿ ಮಾಡುವ ಸಂದರ್ಭದಲ್ಲಿ ಎಸ್.ಸ್.ಎಸ್.ಟಿ. ಮೀಸಲಾತಿಯಿಂದ ಆಯ್ಕೆಯಾಗಿ ಬಂದ ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಯಾವುದೇ ಧ್ವನಿಯನ್ನು ಸಹಾ ಎತ್ತದೆ ಮೂಕ ಪ್ರೇಕ್ಷಕರಾಗಿರುತ್ತಾರೆ. ಅಲ್ಲಿ ನಮ್ಮ ಜನಾಂಗದ ಬಗ್ಗೆ ಆಲೋಚನೆ ಮಾಡದೇ ತಮ್ಮ ಬಗ್ಗೆ ಮಾತ್ರವೇ ಆಲೋಚನೆ ಮಾಡುವುದರಲ್ಲಿ ಮುಳುಗಿರುತ್ತಾರೆ. ನ್ಯಾಯಾಲಯದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಯ ಬಗ್ಗೆ ಹಲವಾರು ತೀರ್ಪುಗಳು ಬಂದಿದ್ದರು ಸಹಾ ಅದರ ಜಾರಿಯ ಬಗ್ಗೆ ಯಾರು ಸಹಾ ಮಾತನಾಡಿಲ್ಲ ಎಂಬುದು ವಿಷಾದನೀಯ ಎಂದು ಮಹೇಶ್ವರಪ್ಪ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ, ಜೆ.ಜೆ. ಹಟ್ಟಿ, ಅಟ್ರಾಸಿಟಿ ಕಮಿಟಿ ಸದಸ್ಯ ಬಿ. ರಾಜಪ್ಪ ವಹಿಸಿದ್ದರು. ಪತ್ರಕರ್ತ ಮಹೇಶ್ ಬಾಬು ಮತ್ತು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ. ಶಿವುಯಾದವ್, ರಾಜ್ಯ ಮಾದಿಗ ಯುವ ಸೇನೆ ಅಧ್ಯಕ್ಷರಾದ ಬಿ.ಓ. ಗಂಗಾಧರ, ಸಿ.ಎ. ತಿಪ್ಪೇಸ್ವಾಮಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.