Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈಲು ಪ್ರಯಾಣಿಕರೇ ಎಚ್ಚರ : ಈ ತಪ್ಪು ಮಾಡಿದ್ರೆ 1,000 ರೂ.ದಂಡ, ಜೈಲು ಶಿಕ್ಷೆ ಗ್ಯಾರಂಟಿ!

Train passengers, beware: Making this mistake guarantees a fine of Rs 1,000 and a jail term!
---Advertisement---

ನವದೆಹಲಿ : ರೈಲು ಪ್ರಯಾಣದ ವೇಳೆ ಅಥವಾ ರೈಲ್ವೆ ನಿಲ್ದಾಣಗಳಲ್ಲಿ ಸ್ಪೀಕರ್ ಹಾಕಿ ಹಾಡು-ವಿಡಿಯೋ ವೀಕ್ಷಿಸುವುದು ಅಥವಾ ಅತಿಯಾದ ಶಬ್ದದಲ್ಲಿ ಮೊಬೈಲ್‌ನಲ್ಲಿ ಮಾತನಾಡುವುದಕ್ಕೆ ಇನ್ನು ಮುಂದೆ ಕಠಿಣ ಕಡಿವಾಣ ಬೀಳಲಿದೆ. ಇಂತಹ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ₹1,000 ವರೆಗೆ ದಂಡ, ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ ಎಂದು ದಕ್ಷಿಣ ರೈಲ್ವೆ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ.

ದಕ್ಷಿಣ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರ (PCCM) ಅನುಮೋದನೆಯೊಂದಿಗೆ ಅಕ್ಟೋಬರ್ 16ರಂದು ಎಲ್ಲ ವಿಭಾಗಗಳಿಗೆ ಈ ನಿರ್ದೇಶನ ನೀಡಲಾಗಿದ್ದು, ನಿಯಮ ಅನುಷ್ಠಾನದ ಕುರಿತು ಅಕ್ಟೋಬರ್ 20ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಸುತ್ತೋಲೆಯಲ್ಲಿ ಏನಿದೆ?

ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆ (PA System) ಮೂಲಕ ಪ್ರಾದೇಶಿಕ ಭಾಷೆ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಿರಂತರವಾಗಿ ಜಾಗೃತಿ ಪ್ರಕಟಣೆಗಳನ್ನು ಹೊರಡಿಸುವಂತೆ ವಿಭಾಗಗಳಿಗೆ ತಿಳಿಸಲಾಗಿದೆ.

ಪ್ರಯಾಣದ ವೇಳೆ ಮತ್ತು ರೈಲ್ವೆ ಆವರಣದಲ್ಲಿ ಸ್ಪೀಕರ್‌ಗಳಲ್ಲಿ ಸಂಗೀತ ಅಥವಾ ವಿಡಿಯೋ ಹಾಕುವುದು ಹಾಗೂ ಗಟ್ಟಿಯಾಗಿ ಮಾತನಾಡುವುದನ್ನು ತಪ್ಪಿಸಿ. ಇಂತಹ ಕೃತ್ಯಗಳು ರೈಲ್ವೆ ಕಾಯ್ದೆಯ ಸೆಕ್ಷನ್ 145ರ ಅಡಿಯಲ್ಲಿ ಕ್ರಮಕ್ಕೆ ಒಳಪಡಲಿದ್ದು, ₹1000 ವರೆಗೆ ದಂಡ ಮತ್ತು/ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗಬಹುದು. ದಯವಿಟ್ಟು ಇಯರ್‌ಫೋನ್ ಬಳಸಿ,” ಎಂದು ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ನೀಡುವಂತೆ ಸೂಚಿಸಲಾಗಿದೆ.

ಕಾನೂನು ಕ್ರಮವೇನು?

ರೈಲ್ವೆ ಕಾಯ್ದೆಯ ಸೆಕ್ಷನ್ 145(2)ರ ಅಡಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ, ಅಸಭ್ಯವಾಗಿ ವರ್ತಿಸುವ ವ್ಯಕ್ತಿಗಳನ್ನು ರೈಲಿನಿಂದ ಕೆಳಗಿಳಿಸಬಹುದು, ಅವರ ಟಿಕೆಟ್/ಪಾಸ್ ಮುಟ್ಟುಗೋಲು ಹಾಕಿಕೊಳ್ಳಬಹುದು ಹಾಗೂ ₹1000 ದಂಡ ವಿಧಿಸಬಹುದು. ಟಿಕೆಟ್ ಪರೀಕ್ಷಕ (TTE) ದರ್ಜೆಗಿಂತ ಕಡಿಮೆಯಿಲ್ಲದ ವಾಣಿಜ್ಯ ಸಿಬ್ಬಂದಿಗೆ ಈ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ.

ರೈಲ್ವೆ ಸಿಬ್ಬಂದಿ ಸೂಚಿಸಿದ ಮೇಲೂ ಕಿರಿಕಿರಿ ಮುಂದುವರಿಸಿದರೆ, ಆರು ತಿಂಗಳವರೆಗೆ ಸಾದಾ ಜೈಲು ಶಿಕ್ಷೆ, ₹5000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ನಿರ್ಧಾರಕ್ಕೆ ಕಾರಣವೇನು?

ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾದ ನಂತರ ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಲೌಡ್ ಸ್ಪೀಕರ್ ಹಾಕಿ ವಿಡಿಯೋ ನೋಡುವುದು ಹೆಚ್ಚಾಗಿದ್ದು, ಇದರಿಂದ ಸಹಪ್ರಯಾಣಿಕರ ನೆಮ್ಮದಿಗೆ ಭಂಗ ಬರುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ವಿಶೇಷವಾಗಿ ಎಸಿ ಬೋಗಿಗಳಲ್ಲಿ ಗಟ್ಟಿಯಾಗಿ ದೀರ್ಘಕಾಲ ಮಾತನಾಡುವುದು ಮತ್ತು ಕಿರಿಕಿರಿ ಉಂಟುಮಾಡುವ ರಿಂಗ್‌ಟೋನ್‌ಗಳ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ನೆಮ್ಮದಿಯ ಪ್ರಯಾಣವನ್ನು ಖಚಿತಪಡಿಸಲು ರೈಲ್ವೆ ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

Join WhatsApp

Join Now

Join Telegram

Join Now