ಬಳ್ಳಾರಿ : 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಸೂರ್ಯಕಾಂತಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್ಗೆ ರೂ. 8,343 ಬೆಂಬಲ ಬೆಲೆ ನಿಗದಿಪಡಿಸಿದ್ದು, ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಾರಾಟ ಮಹಾ ಮಂಡಳ ನಿಯಮಿತ ಮೂಲಕ ಖರೀದಿ ಪ್ರಕ್ರಿಯೆ ನಡೆಯಲಿದೆ.
ಖರೀದಿ ಕೇಂದ್ರಗಳ ವಿವರ:

ಬಳ್ಳಾರಿ: ಎ.ಪಿ.ಎಂ.ಸಿ. ಆಡಳಿತ ಕಚೇರಿ, ಎ.ಪಿ.ಎಂ.ಸಿ ಯಾರ್ಡ್, ಬಳ್ಳಾರಿ.
ಸಂಡೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಂಡೂರು (ಸಂಪರ್ಕ: ಶಿವಲಿಂಗಪ್ಪ – 9980676497).
ಹೆಚ್ಚಿನ ಮಾಹಿತಿಗಾಗಿ ಕೆ.ಒ.ಎಫ್ ಶಾಖೆಯ ಶಿವಮೂರ್ತಿ ಡಿ.ಎಚ್. – 8722047273 ರವರನ್ನು ಸಂಪರ್ಕಿಸಬಹುದು
ನೋಂದಣಿ ದಿನಾಂಕ ಮತ್ತು ಖರೀದಿ ಮಿತಿ:
ನೋಂದಣಿಗೆ ಡಿಸೆಂಬರ್ 19 ಕೊನೆಯ ದಿನವಾಗಿದ್ದು, ಡಿಸೆಂಬರ್ 19 ರಿಂದ 29 ರವರೆಗೆ ಖರೀದಿ ಅವಧಿಯಾಗಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ಗರಿಷ್ಠ 20 ಕ್ವಿಂಟಾಲ್ ಉತ್ಪನ್ನವನ್ನು ಮಾತ್ರ ಖರೀದಿಸಲಾಗುತ್ತದೆ. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ, ಕಚೇರಿ ಕೆಲಸದ ವೇಳೆಯಲ್ಲಿ ಖರೀದಿ ನಡೆಯಲಿದೆ.
ಅಗತ್ಯವಿರುವ ದಾಖಲೆಗಳು ಹಾಗೂ ಷರತ್ತುಗಳು
2026-27 ನೇ ಸಾಲಿನ ಪಹಣಿ ಪತ್ರ. ರೈತರು ಫ್ರೂಟ್ಸ್ ತಂತ್ರಾAಶದಲ್ಲಿ ನೋಂದಾಯಿಸಿಕೊAಡು ಎಫ್ಐಡಿ (ಫ್ರೂಟ್ಸ್ ಐಡಿ) ಹೊಂದಿರುವುದು ಕಡ್ಡಾಯ. (ದೋಷವಿದ್ದಲ್ಲಿ ಅಥವಾ ಐಡಿ ಇಲ್ಲದಿದ್ದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸುವುದು). ಮೂಲ ಆಧಾರ್ ಕಾರ್ಡ್. ಆಧಾರ್ ಕಾರ್ಡ್ನೊಂದಿಗೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ಬುಕ್ನ ನಕಲು ಪ್ರತಿ. ಮಾರಾಟಕ್ಕೆ ತರುವ ಸೂರ್ಯಕಾಂತಿ ಒಣಗಿದ ಮತ್ತು ಸ್ವಚ್ಛವಾದ ಎಫ್ಎಕ್ಯೂ ಗುಣಮಟ್ಟದ್ದಾಗಿರಬೇಕು.
ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗದೆ, ನೇರವಾಗಿ ಖರೀದಿ ಕೇಂದ್ರಗಳಿಗೆ ತೆರಳಿ ನೋಂದಾಯಿಸಿಕೊ0ಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












