ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಹಲವು ಕಡೆ ಈಗಾಗಲೇ ಬಿಜೆಪಿ ಗೆಲುವು ಸಾಧಿಸುವ ಮುನ್ಸೂಚನೆ ಸಿಕ್ಕಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸಗೊಂಡಿದ್ದಾರೆ. ಪ್ರಹ್ಲಾದ್ ಜೋಶಿ ಅವರು ಉತ್ತರಾಖಂಡ್ ನ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು.
ಈ ಬಗ್ಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಉತ್ತರಖಾಂಡ್ ನಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ. ಜನರಿಗೆ ನೀಡಿದ್ದ ಭರವಸೆಗಳನ್ನ ನಾವೂ ಈಡೇರಿಸಿದ್ದೇವೆ. ಮೋದಿ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಉತ್ತರಾಖಂಡ್ ನ ಶೇಕಡ 70 ರಷ್ಟು ಮನೆಗಳಿಗೆ ನಾವೂ ತಲುಪಿದ್ದೇವೆ.
ಎಲ್ಲರಿಗೂ ನಮ್ಮ ಸರ್ಕಾರದ ಯೋಜನೆಗಳನ್ನ ತಲುಪಿಸಿದ್ದೇವೆ. ಸಿಎಂ ಗಳ ಬದಲಾವಣೆ ಬಗ್ಗೆ ಜನ ತಲೆ ಕೆಡಿಸಿಕೊಂಡಿಲ್ಲ. ಕಾಂಗ್ರೆಸ್ ನವರು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೆ. ಪ್ರಧಾನಿ ಮೋದಿ ಕೊಟ್ಟ ಯೋಜನೆಗಳನ್ನ ತಲುಪಿಸಿದ್ದೇವೆ ಅಷ್ಟೇ. ಯೋಜನೆಗಳು ಜನರಿಗೆ ತಲುಪುವಂತೆ ಮಾಡಿದ್ದೇವೆ. ಹೀಗಾಗಿ ನಾವೂ ಯಶಸ್ವಿಯಾಗಿದ್ದೇವೆ ಅಷ್ಟೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.