Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು: ಯುವತಿ ಅನುಮಾನಾಸ್ಪದ ಸಾವು; ‘ಲವ್ ಜಿಹಾದ್’ ಆರೋಪಿಸಿ ಸಮಗ್ರ ತನಿಖೆಗೆ ಹಿಂದೂ ಜಾಗರಣ ವೇದಿಕೆ ಆಗ್ರಹ

---Advertisement---

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 14 : ​ಹಿರಿಯೂರಿನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದ್ದು, ಇದನ್ನು ‘ಲವ್ ಜಿಹಾದ್’ ಪ್ರಕರಣವೆಂದು ಆರೋಪಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

​ಲಭ್ಯವಾಗಿರುವ ವಿವರಗಳ ಪ್ರಕಾರ, ಹೊಸಯಳನಾಡು ಗ್ರಾಮದ ನಿವಾಸಿ ನಾಗರಾಜ್ ಅವರ ಪುತ್ರಿ ಆಶಾ ಎಂಬ ಯುವತಿಯನ್ನು ಹಿರಿಯೂರು ಟೌನ್ ವಾಸಿಯಾದ ಮುಸ್ಲಿಂ ಸಮುದಾಯದ ಸುಮಾರು 40 ವರ್ಷದ ಇಮ್ರಾನ್ ಎಂಬಾತ ಪ್ರೀತಿಯ ಹೆಸರಿನಲ್ಲಿ ಮೋಸದ ಬಲೆಗೆ ಬೀಳಿಸಿಕೊಂಡು 21-02-2023 ರಂದು ವಿವಾಹವಾಗಿದ್ದನು. ಈ ಹಿಂದೆ ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಭೋವಿ ಜನಾಂಗಕ್ಕೆ ಸೇರಿದ ಆಕೆಯ ತಂದೆ ನಾಗರಾಜ್ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಎಸ್.ಪಿ ಕಚೇರಿಯಲ್ಲಿ ವಿಚಾರಣೆ ನಡೆಸಿ, ಮಗಳು ಮದುವೆಯಾಗಿರುವ ಬಗ್ಗೆ ತಿಳಿಸಿ ಅವರ ಸುದ್ದಿಗೆ ಹೋಗದಂತೆ ಹೇಳಿಕೆ ಪಡೆಯಲಾಗಿತ್ತು. ಬಳಿಕ ತಂದೆ ಆಸ್ತಿ ಖುಲಾಸೆ ಪತ್ರವನ್ನು ಬರೆದುಕೊಟ್ಟು ಕಳುಹಿಸಲಾಗಿತ್ತು.
​ವಿವಾಹದ ನಂತರದ ದಿನಗಳಲ್ಲಿ ಇಮ್ರಾನ್ ಆಕೆಗೆ ಪ್ರತಿನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದು, ತವರು ಮನೆಯಿಂದ ಹಣ ತರುವಂತೆ ಪೀಡಿಸುವುದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡುವುದನ್ನು ಮಾಡುತ್ತಿದ್ದನು. ಈ ಎಲ್ಲಾ ವಿಚಾರಗಳನ್ನು ಆಶಾ ತನ್ನ ತಾಯಿ ಮತ್ತು ಅಕ್ಕನಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ಕಿರುಕುಳ ತಾಳಲಾರದೆ ಕುಟುಂಬಸ್ಥರು ಆಕೆಗೆ ಫೋನ್ ಪೇ ಹಾಗೂ ನಗದಿನ ಮೂಲಕ ಹಣವನ್ನು ಸಹ ನೀಡಿದ್ದರು. ಅಲ್ಲದೆ, ಪ್ರೀತಿಸಿ ಮದುವೆಯಾಗಿ ಏಕೆ ಕಿರುಕುಳ ನೀಡುತ್ತಿದ್ದೀಯ ಎಂದು ಆಶಾಳ ತಾಯಿ ಪ್ರಶ್ನಿಸಿದಾಗ, ಆರೋಪಿಯು ಅವರಿಗೂ ಬೈದು, ಜಾತಿ ನಿಂದನೆ ಮಾಡಿದ್ದನು.

​ಹೀಗೆ ದಿನಗಳು ಕಳೆದಂತೆ ಮತಾಂತರವಾಗುವಂತೆ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದು, ದಿನಾಂಕ 12-10-2026 ರಂದು ಆಶಾ ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದಾಳೆ. ಈ ಮೋಸದ ಪ್ರೀತಿಯ ಬಲೆಗೆ ಬಿದ್ದು ಯುವತಿ ಸಾವಿಗೀಡಾಗಿರುವುದನ್ನು ಗಮನಿಸಿದರೆ ಇದು ನೇರ ಲವ್ ಜಿಹಾದ್ ಪ್ರಕರಣವಾಗಿದ್ದು, ಇದರಲ್ಲಿ ಅನೇಕರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ ಮಾಡಿದೆ. ಆದ್ದರಿಂದ ಈ ಪ್ರಕರಣವನ್ನು ಸಮಗ್ರವಾಗಿ ಹೆಚ್ಚಿನ ರೀತಿಯಲ್ಲಿ ತನಿಖೆ ನಡೆಸಿ, ಇಂತಹ ಲವ್ ಜಿಹಾದ್ ಪ್ರಕರಣಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಗಮನಹರಿಸಬೇಕು ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕೆಂದು ಸಂಘಟನೆ ಆಗ್ರಹಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now