ಪಣಜಿ: ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮತೆಣಿಕೆ ಆರಂಭವಾಗಿದೆ. ಈ ಬೆನ್ನಲ್ಲೆ ಗೋವಾದಲ್ಲಿ ಅತಂತ್ರ ಫಲಿತಾಂಶವೆಂಬುದು ಗೋಚರವಾಗಿದೆ. ಹೀಗಾಗಿ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳಿರುವ ಹೊಟೇಲ್ ಗೆ ಭದ್ರತೆ ಒದಗಿಸಲಾಗಿದೆ. ಗೋವಾದ ಗ್ರೇಸ್ ಮೆಜೆಸ್ಟಿಕ್ ಹೊಟೇಲ್ ಗೆ ಭದ್ರತೆ ಒದಗಿಸಲಾಗಿದೆ. ಈ ಹೊಟೇಲ್ ನಲ್ಲಿ ಗೋವಾ ಮತ್ತು ಕರ್ನಾಟಕ ಬೌನ್ಸರ್ ಗಳಿಂದ ಭದ್ರತೆ ಒದಗಿಸಲಾಗಿದೆ. ಈ ಮೊದಲೇ ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೋವಾಗೆ ಹೋಗಿ, ಶಾಸಕರನ್ನ ಭದ್ರವಾಗಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಇಂದು ಮಧ್ಯಾಹ್ನ1 ಗಂಟೆಗೆ ಕಾಂಗ್ರೆಸ್ ತುರ್ತು ಸಭೆ ಕರೆದಿದೆ. ಈ ಬೆನ್ನಲ್ಲೇ ದೆಹಲಿಯ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆಗೆ ಕಾರ್ಯಕರ್ತರು ಮುಂದಾಗಿದ್ದಾರೆ. ಇವಿಎಂ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.