Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಬ್ಬದ ಹೊತ್ತಲ್ಲೇ ಆಭರಣ ಪ್ರಿಯರಿಗೆ ಸಿಹಿಸುದ್ದಿ : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

---Advertisement---

ನವದೆಹಲಿ :  ದಸರಾ ಮತ್ತು ದೀಪಾವಳಿ ಹಬ್ಬಗಳ ಮುನ್ನವೇ ಚಿನ್ನಾಭರಣ ಪ್ರಿಯರಿಗೆ ಶುಭವಾರ್ತೆ ಸಿಕ್ಕಿದೆ. ಕಳೆದ ಒಂದು ವಾರದಿಂದ ಸತತವಾಗಿ ಏರಿಕೆಯಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ದರಗಳು ಇಂದು ದಿಢೀರನೆ ಕುಸಿತ ಕಂಡಿವೆ.

ಮಂಗಳವಾರದ ದರಕ್ಕೆ ಹೋಲಿಸಿದರೆ ಬುಧವಾರ ಬೆಳಗ್ಗೆ 10 ಗಂಟೆಯ ವೇಳೆಗೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 1,000 ರೂ.ಗೂ ಅಧಿಕ ಇಳಿಕೆಯಾಗಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಬಂಗಾರದ ದರದಲ್ಲಿ 900 ರೂ.ಗೂ ಹೆಚ್ಚು ಕಡಿತವಾಗಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,48,260 ರೂ. ತಲುಪಿದೆ.

ಪ್ರಮುಖ ನಗರಗಳಲ್ಲಿ ಇಂದಿನ ದರ ವಿವರ:

ಬೆಂಗಳೂರು, ಮುಂಬೈ, ಪುಣೆ: 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,48,260 ರೂ. ಹಾಗೂ 22 ಕ್ಯಾರೆಟ್‌ನ 10 ಗ್ರಾಂ ದರ 1,35,900 ರೂ. ನಷ್ಟಿದೆ. ಇಲ್ಲಿ ಪ್ರತಿ ಕಿಲೋಗ್ರಾಂ ಬೆಳ್ಳಿ ದರ 2,34,900 ರೂ. ದಾಖಲಾಗಿದೆ. ಚೆನ್ನೈನಲ್ಲೂ ಬಹುತೇಕ ಇದೇ ರೀತಿಯ ದರಗಳು ಮುಂದುವರಿದಿವೆ.

ಹೈದರಾಬಾದ್ ಮತ್ತು ಆಂಧ್ರಪ್ರದೇಶ: ಹೈದರಾಬಾದ್, ವಿಶಾಖಪಟ್ಟಣ ಹಾಗೂ ವಿಜಯವಾಡಗಳಲ್ಲಿ 24 ಕ್ಯಾರೆಟ್ ಚಿನ್ನ 1,48,260 ರೂ. ಮತ್ತು 22 ಕ್ಯಾರೆಟ್ ಚಿನ್ನ 1,35,900 ರೂ. ನಲ್ಲಿದೆ. ಹೈದರಾಬಾದ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,45,000 ರೂ. ಆಗಿದೆ.

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನ 1,48,410 ರೂ. ಗೆ ಮಾರಾಟವಾಗುತ್ತಿದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,36,050 ರೂ. ನಷ್ಟಿದೆ.

ದರ ಇಳಿಕೆಗೆ ಕಾರಣವೇನು?

ಏಷ್ಯಾ-ಯುರೋಪಿಯನ್ ವಹಿವಾಟು ಅವಧಿಯ ಆರಂಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಬಲಗೊಂಡಿದ್ದೇ ಇಂದಿನ ದರ ಇಳಿಕೆಗೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಇದರ ಜೊತೆಗೆ, ಹೂಡಿಕೆದಾರರು ಅಲ್ಪಾವಧಿಯ ಲಾಭ ಗಳಿಕೆಗಾಗಿ ಚಿನ್ನವನ್ನು ಮಾರಾಟ ಮಾಡಲು (ಪ್ರಾಫಿಟ್ ಬುಕಿಂಗ್) ಮುಂದಾಗಿದ್ದರಿಂದ ಬೆಲೆಗಳು ಕೆಳಮುಖವಾಗಿವೆ.

Join WhatsApp

Join Now

Join Telegram

Join Now