Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯರ ಅನುಭವ, ಮಾರ್ಗದರ್ಶನದಿಂದ ಯುವ ಪೀಳಿಗೆ ಜೀವನ ರೂಪಿಸಿಕೊಳ್ಳಲಿ: ಶ್ರೀ ಶಿವಲಿಂಗಾನಂದ ಸ್ವಾಮೀಜಿ ಕರೆ

---Advertisement---

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ವೃದ್ಧರ ಅನುಭವವನ್ನು ಕಡೆಗಣಿಸದೆ ಅವರು ನೀಡುವ ಸಲಹೆ, ಚಿಂತನೆಗಳನ್ನು ಬಳಸಿಕೊಂಡು ಇಂದಿನ ಯುವ ಪೀಳಿಗೆ ಬೆಳೆಯಬೇಕು ಎಂದು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.

ನಗರದ ಕಬೀರಾನಂದ ವೃದ್ಧಾಶ್ರಮದಲ್ಲಿ ಗುರುವಾರ ಮೇರಾ ಯುವ ಭಾರತ ಆಯೋಜಿಸಿದ್ದ ಅಂತರಾಷ್ಟೀಯ ವೃದ್ಧರ ದಿನದ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.

 

ಇಂದಿನ ಸಮಾಜದಲ್ಲಿ ವೃದ್ಧರನ್ನು ಕಡೆಗಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಹೆಚ್ಚಾಗುತ್ತಿದೆ. ಯಾರು ಈ ರೀತಿ ಮಾಡಬಾರದು ಮನೆಯಲ್ಲಿ ಹಿರಿಯರಿದ್ದರೆ ಅವರನ್ನು ಚನ್ನಾಗಿ ನೋಡಿಕೊಳ್ಳಿ ಅವರ ಅನುಭವದ ಮಾತ್ತುಗಳಿಂದ ಜೀವನ ರೂಪಿಸಿಕೊಳ್ಳಿ. ಬಹಳಷ್ಟು ಜನ ವಯಸ್ಸಾದ ತಂದೆ ತಾಯಿ ಹೊಡಿe ಎಂದು ಭಾವಿಸಿದ್ದಾರೆ.

 

ಅಧುನಿಕತೆ ಬೆಳದಂತೆ ಮನುಷ್ಯನ ಸಂಬಂಧಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತೇವೆ. ನಾವು ಜೀವನದಲ್ಲಿ ಎಷ್ಟೇ ಬೆಳದರೂ ಅದರ ಹಿಂದೆ ನಮ್ಮ ತಂದೆ ತಾಯಿಯ ತ್ಯಾಗ, ಪರಿಶ್ರಮ ಇರುತ್ತದೆ. ಅದನ್ನು ಯಾರು ಮರೆಯಬಾರದು. ತಂದೆ ತಾಯಿ ಸೇವೆ ಮಾಡುವುದು ಒಂದು ಪಣ್ಯದ ಕೆಲಸ. ತಂದೆ ತಾಯಿಗೆ ವಯಸ್ಸಾದ ನಂತರ ಒಂಟಿತನ ಕಾಡದಂತೆ ನೋಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ.ಎಸ್.ಪಿಯು ಕಾಲೇಜಿನ ಪ್ರಾಚಾರ್ಯರಾದ ಉದಯ, ಮೇರಾ ಯುವ ಭಾರತನ ಭರತ, ಶಿಕ್ಷರಾದ ತಿಪ್ಪೇಸ್ವಾಮಿ, ಯೋಗೇಂದ್ರ, ಕಬೀರಾನಂದ ವೃದ್ಧಾಶ್ರಮದ ಪ್ರಸದ್, ರಂಗಸಂಘಟಕ ಪ್ರಕಾಶ್ ಬಾದರದಿನ್ನಿ, ಕಲಾವಿದ ಗುರುಕಿರಣ ಮತ್ತಿತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now