ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಉಕ್ರೇನ್ ಅಕ್ಷರಶಃ ಸ್ಮಶಾನದಂತೆ ಆಗೋಗಿದೆ. ಆದ್ರೆ ಸೋಲು ಒಪ್ಪಿಕೊಳ್ದೆ ಯುದ್ಧ ಮುಂದುವರೆಸಿದ್ದಾರೆ.

ಈ ವೇಳೆ ಉಕ್ರೇನ್ ಪರ ಹೋರಾಡೋದಕ್ಕೆ 20 ಸಾವಿರ ಜನ ಸೇರ್ಪಡೆಯಾಗಿದ್ದಾರೆ. ಸ್ವಯಂ ಪ್ರೇರಿತರಾಗಿ ವಿದೇಶಿ ಪ್ರಜೆಗಳು ಉಕ್ರೇನ್ ಸೇನೆಯನ್ನ ಸೇರಿದ್ದಾರೆಂದು ಉಕ್ರೇನ್ ದೇಶದ ಸಚಿವ ಯೆವ್ಹೆನ್ ಯೆನಿನ್ ಹೇಳಿದ್ದಾರೆ.

ಇನ್ನು ಉಕ್ರೇನ್ ಯುದ್ಧದಿಂದಾಗಿ ಅಲ್ಲಿನ ಮಕ್ಕಳ ಭವಿಷ್ಯ ಅತಂತ್ರವಾಗಿದೆ. 8 ಲಕ್ಷಕ್ಕೂ ಅಧಿಕ ಮಕ್ಕಳು ಉಕ್ರೇನ್ ತೊರೆದಿದ್ದಾರೆ. ರಷ್ಯಾ ಯುದ್ಧದಿಂದ ಮಕ್ಕಳ ಭವಿಷ್ಯಕ್ಕೆ ಅಂಧಕಾರ ಅಂಟಿಕೊಂಡಿದೆ. ಯುದ್ಧ ಪೀಡಿತ ಪ್ರದೇಶಗಳಿಂದ ಜನ ವಲಸೆ ಹೋಗುತ್ತಿದ್ದಾರೆ. ಇನ್ನು ಮಕ್ಕಳು, ಹೆಂಡತಿಯನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಸೈನಿಕರು ಯುದ್ಧ ಭೂಮಿಗೆ ಹಿರಟ ದೃಶ್ಯಗಳು ಇಂದು ಕಂಡಯ ಬಂದಿದೆ.


