ಬೆಂಗಳೂರು, (ಮಾ.07) : ಸಮಾಜದ ಸದೃಢತೆಗೆ ಮಹಿಳೆಯರ ಪಾತ್ರ ಮುಖ್ಯ ಎಂದು ಬಸವ ಪ್ರಭು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.
ವಿಜಯನಗರದ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ತಮ್ಮ ಬದುಕಿನಲ್ಲಿ ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ. ಅದನ್ನು ಪಡೆಯಬೇಕಾದರೆ ಶರಣ ಸಂಗಮದಂತಹ ಕಾರ್ಯಕ್ರಮಗಳಿಗೆ ಬರುವುದರಿಂದ ನಿಮ್ಮಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಬಸವ ಕೇಂದ್ರದ ಅಧ್ಯಕ್ಷರಾದ ಅರುಣ್ ಕುಮಾರ್ ಡಿ ಟಿ ಮಾತನಾಡಿ ಮುರುಘಾ ಮಠದ ಶಾಖೆಗಳಲ್ಲಿ ಶರಣ ಸಂಗಮ ಕಾರ್ಯಕ್ರಮಗಳ ಮೂಲಕ ಬಸವಾದಿ ಶರಣರ ತತ್ವ ಆಚರಣೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಬಸವ ಕೇಂದ್ರಗಳು ಮಾಡುತ್ತಿವೆ ಎಂದರು.
ಮುಖ್ಯ ಅಥಿತಿಗಳಾಗಿ ಶೈಲಜಾ ವಿ ಸೋಮಣ್ಣ ನವರು ಮಾತನಾಡಿ ಸ್ತ್ರೀಯರು ಇಂದಿನ ದಿನಗಳಲ್ಲಿ ತಾಳ್ಮೆಯಿಂದ ಇರಬೇಕು ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುವಂತೆ ತಿಳಿಸಿದರು.
ಇಂದುಮತಿ ಸಾಲಿಮಠ ರವರು ಈ ನಾಡಿನಲ್ಲಿ ಮಹಿಳೆಯರು ಧೃತಿಗೆಡದೆ ಯಶಸ್ವಿ ಜೀವನ ನಡೆಸುವುದು ಮುಖ್ಯ, ಅದಕ್ಕೆ ನನ್ನ ಜೀವನವೇ ಉದಹರಣೆ ಎಂದರು.
ಪೊಲೀಸ್ ಅಧಿಕಾರಿ ಸ್ವಾತಿ ಮಾತನಾಡಿ ಇನ್ನೂ ಕೆಲವು ಕಡೆ ಮಹಿಳೆಯರ ಮೇಲೆ ಧೌರ್ಜನ್ಯ ನಡೆಯುತ್ತಿದೆ ಅದು ಸಂಪೂರ್ಣವಾಗಿ ನಿಲ್ಲಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾ ನಾಯ್ಡು, ಮಧುರಾ, ಅಪ್ಪುಗೆರೆ ತಿಮ್ಮರಾಜು ಉಪಸ್ಥಿತರಿದ್ದರು.
ಮಹಿಳಾ ಸಬಲೀಕರಣ ಅದರ ಕಲ್ಪನೆ ವಿಷಯವಾಗಿ ಉಪನ್ಯಾಸವನ್ನು ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪೂರ್ಣಿಮಾ ನಡೆಸಿಕೊಟ್ಟರು.
ಶರಣೆ ಚಂದ್ರಮತಿ ವಚನಗಾಯನ ಮಾಡಿದರು, ಕು.ಅಮೃತ ಕಾರ್ಯಕ್ರಮ ನಿರ್ವಹಣೆ ಮಾಡಿದರು.