ವಿಜಯವಾಡ : ಇತ್ತೀಚೆಗಂತು ಶ್ವಾನ, ಬೆಕ್ಕು ಪ್ರೇಮಿಗಳು ಹೆಚ್ಚಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಬೆಕ್ಕಿನ ಬಾಯಲ್ಲಿರುವ ಬಿಸ್ಕೇಟ್ ಅನ್ನು, ನಾಯಿ ಬಾಯಿಗೆ ಪ್ರೀತಿ ಅಪ್ಪಿ ಮುತ್ತು ಕೊಡುವಷ್ಟು ಆತ್ಮೀಯತೆ. ಆದ್ರೆ ಅದರಿಂದಾಗುವ ಅನಾಹುತಗಳು ಮಾತ್ರ ಸನಿಹಕ್ಕೂ ಸುಳಿದಿರೋದಿಲ್ಲ.
ಕೃಷ್ಣಾ ಜಿಲ್ಲೆಯ ವೇಮುಲವಾಡ ಎಂಬಲ್ಲಿ ಇಬ್ಬರು ಮಹಿಳೆಯರಿಗೆ ಬೆಕ್ಕು ಕಚ್ಚಿದ್ದು, ಜೀವವನ್ನೆ ಬಲಿ ಪಡೆದಿದೆ. 64 ವರ್ಷದ ಕಮಲಾ ಮತ್ತು 43 ವರ್ಷದ ನಾಗಿಣಿ ಎಂಬುವವರು ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ನಿಂದ ಸಾವನ್ನಪ್ಪಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಈ ಇಬ್ಬರು ಮಹಿಳೆಯರಿಗೆ ಸಾಕಿದ್ದ ಬೆಕ್ಕು ಕಚ್ಚಿದೆ. ತಕ್ಷಣ ಮಹಿಳೆಯರು ರೇಬಿಸ್ ಚುಚ್ಚು ಮದ್ದು ತೆಗೆದುಕೊಂಡು ಮನೆಗೆ ತೆರಳಿದ್ದಾರೆ. ಆದ್ರೆ ಆ ಇಬ್ಬರಿಗೂ ಸರಿಯಾಗಿ ಗುಣಮುಖವಾಗಿಲ್ಲ. ಈಗ ಇದ್ದಕ್ಕಿದ್ದ ಹಾಗೇ ಮತ್ತೆ ಆರೋಗ್ಯ ಕೆಟ್ಟಿದೆ.
ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ರೇಬೀಸ್ ನಿಂದಲೇ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಈ ಇಬ್ಬರ ಸಾವಿನ ಬಳಿಕ ಸ್ಥಳೀಯರೊಬ್ಬರು ಆ ಬೆಕ್ಕಿಗೆ ಹುಚ್ಚು ನಾಯಿ ಕಡಿದಿತ್ತು. ಹೀಗಾಗಿಯೇ ಆ ಮಹಿಳೆಯರಿಗೆ ರೇಬೀಸ್ ಆಗಿದೆ. ಆ ಬೆಕ್ಕು, ನಾಯಿ ಎರಡು ಕೂಡ ಸ್ವಲ್ಪ ದಿನಗಳ ಹಿಂದೆಯೇ ಸತ್ತು ಹೋಗಿವೆ ಎಂದಿದ್ದಾರೆ.