ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಕ್ಷೇತ್ರಗಳು ಹಾಗೂ ನಾವೀನ್ಯತಾ ಯೋಜನೆಗಳು ರೂಪಿಸಿದವರಿಗೆ ಭಾರತದ ಅತ್ಯುನ್ನತ ಸ್ವತಂತ್ರ ಸಿವಿಲ್ ಗೌರವಗಳಲ್ಲಿ ಒಂದಾಗಿದರುವ ಸ್ಕೋಚ್ ಪ್ರಶಸ್ತಿಯನ್ನು ಟಿ. ಯೋಗೇಶ್ ಗೆ ಶನಿವಾರ ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.
ಉತ್ತಮ ಆಡಳಿತ ಡಿಜಿಟಲ್ ಇಂಡಿಯಾ, ಮೂಲಭೂತ ಸೌಕರ್ಯಗಳು, ಸಾಮಾಜಿಕ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಗೌರವಿಸುವ ಪ್ರಶಸ್ತಿಯನ್ನು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ ನ ಸಿಲ್ವರ್ ಓಕ್ ಹಾಲ್ ನಲ್ಲಿ 2026 ಸೆ.26 ರಂದು ಗೌರವಿಸಲಾಯಿತು.
ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಬುಡಕಟ್ಟು ಕಲ್ಯಾಣದ ‘ಸ್ವರ್ಣ ಪ್ರಶಸ್ತಿ” ಗೌರವಕ್ಕೆ ಪುರಸ್ಕೃತರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನವರಾದ ಟಿ ಯೋಗೇಶ್ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಕಾರ್ಯನಿರ್ವಹಣಾಧಿಕಾರಿಯಾಗಿ ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು










