ಬೆಂಗಳೂರು: ಆರೋಗ್ಯ ಇಲಾಖೆ ಕೊವಿಡ್ ವರದಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 229 ಜನರಿಗೆ ಹೊಸದಾಗಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಇನ್ನು ಕಳೆದ 24 ಗಂಟೆಯಲ್ಲಿ 10726 ಜನಕ್ಕೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 37584 RTPCR ಟೆಸ್ಟ್ ಸೇರಿದಂತೆ ಒಟ್ಟು 48310 ಜನರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಅದರಲ್ಲಿ 229 ಜನರಿಗೆ ಕೊರೊನಾ ಕನ್ಫರ್ಮ್ ಆಗಿದೆ. 146 ಜನ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಇನ್ನು ಕಳೆದ 24 ಗಂಟೆಯಲ್ಲಿ 264 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನು ಕೊರೊನಾದಿಂದಾಗಿ 3 ಜನ ಸಾವನ್ನಪ್ಪಿದ್ದಾರೆ.