ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 20 : ತಾಲೂಕಿನ ಗುಂಜಲಗುಂಟೆ (ಗಾಂಧಿನಗರ) ಗ್ರಾಮದ ಹಿರಿಯರಾದ ಕೆಂಚಮ್ಮ (85 ವರ್ಷ) ಅವರು ಭಾನುವಾರ ಬೆಳ್ಳಗ್ಗೆ 9 ಗಂಟೆ ನಿಧನರಾಗಿದ್ದಾರೆ.
ಮೃತರಿಗೆ ಮೂವರು ಪುತ್ರರು , ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೋಮವಾರ ಮಧ್ಯಾಹ್ನ 1 ಗಂಟೆಗೆ ಗ್ರಾಮದ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.









