ಕಲಬುರಗಿ: ಭಜರಂಗದಳದ ಕಾರ್ಯಕರ್ತನ ಹತ್ಯೆಯಾದ ಬಳಿಕ ಹರ್ಷನ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಆರ್ಥಿಕ ಸಹಾಯ ನೀಡಲಾಗಿದೆ. ಇನ್ನು ರಷ್ಯಾ ಉಕ್ರೇನ್ ನಡುವಿನ ಯುದ್ಧದಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾರೆ. ಈ ಎರಡು ಪ್ರಕರಣ ಸಂಬಂಧ ಮಾತನಾಡಿರುವ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಆಕ್ರೋಶಗೊಂಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿ ಎಂ ಇಬ್ರಾಹಿಂ ಸಿಎಂ ಬೊಮ್ಮಾಯಿ ಅವರನ್ನ ಪ್ರಶ್ನೆ ಮಾಡಿದ್ದಾರೆ. ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ಏನು ಕೊಟ್ರಿ..?ಆ ವಿದ್ಯಾರ್ಥಿ ಕುಟುಂಬಕ್ಕೆ ಏನ್ ಕೊಟ್ಟಿಯೋ ಬೊಮ್ಮಾಯಿ..?.
ನರಗುಂದದಲ್ಲಿ ಒಬ್ಬ ಮುಸ್ಲಿಂ ಹುಡುಗನನ್ನ ಭಜರಂಗದಳದ ಹುಡುಗರು ಹತ್ಯೆಗೈದಿದ್ದಾರೆ. ಹತ್ಯೆಯಾದ ಮುಸ್ಲಿಂ ಹುಡುಗನ ಕುಟುಂಬಕ್ಕೆ ಏನನ್ನು ಕೊಟ್ಟಿಲ್ಲ. ದೇಶ ಕಾಯುವ ಯೋಧ ಹುತಾತ್ಮರಾದರೂ ಏನು ಕೊಟ್ಟಿಲ್ಲ. ಮುಸಲ್ಮಾನ ಎಂಬ ಕಾರಣಕ್ಕೆ ಸರ್ಕಾರ ನಯಾ ಪೈಸೆ ಕೊಟ್ಟಿಲ್ಲ. ಇದು ನ್ಯಾಯ ಏನ್ರಿ ಸಿಎಂ ಬಸವರಾಜ್..? ಇದರ ಶಾಪ ನಿಮ್ಮ ಮಕ್ಕಳಿಗೆ ತಟ್ಟದೇ ಇರುತ್ತದೆಯಾ ಬೊಮ್ಮಾಯಿ..? ಎಂದು ಪ್ರಶ್ನಿಸಿದ್ದಾರೆ.