ಕಳೆದ ಹತ್ತು ದಿನದಿಂದ ಉಕ್ರೇನ್ ನಲ್ಲಿ ಗುಂಡು, ಬಾಂಬ್ ದೇ ಸದ್ದು ಕೇಳಿ ಜನ ಜೀವ ಕೈನಲ್ಲಿಡಿದುಕೊಂಡು ಬದುಕುತ್ತಿದ್ದರು. ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಭಾರತ ಸರ್ಕಾರ ಕೂಡ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನ ಕರೆತರಲು ಪ್ರಯತ್ನಗಳನ್ನ ಮಾಡ್ತಾ ಇದೆ. ಈ ಮಧ್ಯೆ ಸದ್ಯ ರಷ್ಯಾ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿದೆ.
ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡುವವರೆಗೂ ಕದನ ವಿರಾಮ ಘೋಷಿಸಿದೆ ಎನ್ನಲಾಗಿದೆ. ಆದ್ರೆ ರಷ್ಯಾ ಕದನ ವಿರಾಮ ಘೋಷಣೆಯಿಂದಾಗಿ ಮರಿಪೋಲ್ ಜನ ಮಾತ್ರ ನಿಟ್ಟುಸಿರು ಬಿಟ್ಟಿದ್ದಾರೆ.
ಯಾಕೆಂದರೆ ಕಳೆದ ಕೆಲವು ದಿನಗಳಿಂದ ಬಂದರು ನಗರಿ ಮರಿಪೋಲ್ ಗೆ ಉಕ್ರೇನ್ ದಿಗ್ಭಂಧನ ಹಾಕಿತ್ತು. ಇದರಿಂದ ಅಲ್ಲಿ ವಾಸ ಮಾಡುತ್ತಿದ್ದ ಜನರಗೆ ಅಕ್ಷರಶಃ ಉಸಿರುಗಟ್ಟುವಂತ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟೆ ಅಲ್ಲ, ಆ ಪ್ರದೇಶಕ್ಕೆ ನೀರು, ಕರೆಂಟ್ ಸೌಲಭ್ಯ ಕಟ್ ಆಗಿತ್ತು. ಚಳಿ ತಡೆದುಕೊಳ್ಳಲು ಬಿಸಿ ಗಾಳಿಯೂ ಬೀಸುತ್ತಿರಲಿಲ್ಲ. ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು.
ಇನ್ನು ಬದುಕು ಅಸಾಧ್ಯವೆನಿಸಿದ್ದಾಗ ರಷ್ಯಾ ಕದನ ವಿರಾಮ ಘೋಷಿಸಿ, ಸುರಕ್ಷಿತವಾಗಿ ಅಲ್ಲಿನ ಜನ ತಲುಪಲು ಕಾರಿಡಾರ್ ಸೃಷ್ಟಿ ಮಾಡಿಕೊಟ್ಟಿದೆ.