ಕಳೆದ 10 ದಿನಗಳ ಯುದ್ಧ ಇಂದಿಗೆ ಅಂತ್ಯವಾಗುತ್ತಿದೆ. ಇದೀಗ ರಷ್ಯಾ ಉಕ್ರೇನ್ ಮೇಲೆ ಕದನ ವಿರಾಮ ಘೋಷಣೆ ಮಾಡಿದೆ. ಮಾನವೀಯ ದೃಷ್ಟಿಯಿಂದ ಕದನ ವಿರಾಮ ಘೋಷಣೆ ಎಂದು ಹೇಳಿದೆ. ಕಳೆದ 10 ದಿನಗಳಿಂದ ಸಾಕಷ್ಟು ಸಾವು ನೋವಿನಿಂದ ಉಕ್ರೇನ್ ನರಳಿದೆ. ಈಗ ಕದನ ವಿರಾಮ ಘೋಷಣೆ ಮಾಡಿದೆ.
ಕದನ ವಿರಾಮ ಘೋಷಣೆ ಮಾಡಿದ ಹಿನ್ನೆಲೆ ರಷ್ಯಾ ಸಂಪೂರ್ಣ ಹಿಡಿತ ಸಾಧಿಸಿತಾ ಎಂಬ ಪ್ರಶ್ನೆ ಕಾಡುತ್ತಿದೆ. ಮೊದಲಿಗೆ ಎರಡು ನಗರಗಳಲ್ಲಿ ಮಾತ್ರ ಕದನ ವಿರಾಮ ಘೋಷಿಸಿತ್ತು, ಬೆಳಗ್ಗೆ 11.30 ರ ವೇಳೆಗೆ ಘೋಷಣೆ ಮಾಡಿದೆ. ಮರಿಯುಪೋಲ್ ಮತ್ತು ವೋಲ್ನೋವಾಕ್ ನಗರದಲ್ಲಿ ಕದನ ವಿರಾಮ ಘೋಷಣೆ ಮಾಡಿತ್ತು. ರಷ್ಯಾದ ವಿರುದ್ಧ ಜಾಗತಿಕ ಮಟ್ಟದಲ್ಲಿ ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ. ಇದೀಗ ಉಕ್ರೇನ್ ನಾದ್ಯಂತ ಕದನ ವಿರಾಮ ಘೋಷಣೆ ಮಾಡಿದೆ.