Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ SSLC ವಿದ್ಯಾರ್ಥಿಗಳಿಗೆ ಸೆ.23 ರಿಂದ SA-1 ಪರೀಕ್ಷೆ ಆರಂಭ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

---Advertisement---

ಬೆಂಗಳೂರು: ರಾಜ್ಯದ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ 2026-27 ನೇ ಸಾಲಿನ ರಾಜ್ಯಮಟ್ಟದ ಸಂಕಲನಾತ್ಮಕ ಮೌಲ್ಯಮಾಪನ-1 (SA-1 / ಅರ್ಧವಾರ್ಷಿಕ ಪರೀಕ್ಷೆ) ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಿಸಿದೆ. ಶೈಕ್ಷಣಿಕ ಮಾರ್ಗಸೂಚಿಯಂತೆ ಈ ಪರೀಕ್ಷೆಗಳು ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಯಲಿವೆ.

ಪೂರ್ವಸಿದ್ಧತಾ ಪರೀಕ್ಷೆಯ ಮಾದರಿಯಲ್ಲಿಯೇ ಮಂಡಳಿಯಿಂದಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಪರೀಕ್ಷಾ ದಿನದಂದು ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಡೌನ್‌ಲೋಡ್ ಮಾಡಿಕೊಳ್ಳುವ ಪ್ರಶ್ನೆಪತ್ರಿಕೆಗಳ ಮೇಲೆ ಆಯಾ ಶಾಲಾ ಸಂಕೇತದ (School Code) ವಾಟರ್‌ಮಾರ್ಕ್ ಇರಲಿದೆ.

ಪರೀಕ್ಷಾ ವೇಳಾಪಟ್ಟಿ (Time Table):

23/09/2026 (ಬುಧವಾರ): ಪ್ರಥಮ ಭಾಷೆ (ಬೆಳಿಗ್ಗೆ 10:30 ರಿಂದ 1:45)

24/09/2026 (ಗುರುವಾರ): ವಿಜ್ಞಾನ (ಬೆಳಿಗ್ಗೆ 10:30 ರಿಂದ 1:45)

25/09/2026 (ಶುಕ್ರವಾರ): ತೃತೀಯ ಭಾಷೆ (ಬೆಳಿಗ್ಗೆ 10:30 ರಿಂದ 1:30)

26/09/2026 (ಶನಿವಾರ): ಸಮಾಜ ವಿಜ್ಞಾನ (ಬೆಳಿಗ್ಗೆ 10:30 ರಿಂದ 1:45)

28/09/2026 (ಸೋಮವಾರ): ಗಣಿತ (ಬೆಳಿಗ್ಗೆ 10:30 ರಿಂದ 1:45)

29/09/2026 (ಮಂಗಳವಾರ): ದ್ವಿತೀಯ ಭಾಷೆ (ಬೆಳಿಗ್ಗೆ 10:30 ರಿಂದ 1:30)

30/09/2026 (ಬುಧವಾರ): ದೈಹಿಕ ಶಿಕ್ಷಣ / ವೃತ್ತಿ ಶಿಕ್ಷಣ / ಮೌಲ್ಯಶಿಕ್ಷಣ (ಬೆಳಿಗ್ಗೆ 10:30 ರಿಂದ 1:45)

ಪರೀಕ್ಷಾ ದಿನದ ಪ್ರಮುಖ ಸೂಚನೆಗಳು ಮತ್ತು ಕಾರ್ಯಸೂಚಿ

ಬೆಳಿಗ್ಗೆ 9:15: ಪರೀಕ್ಷಾ ದಿನಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಹಾಜರಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಬೆಳಿಗ್ಗೆ 9:30: ಮುಖ್ಯೋಪಾಧ್ಯಾಯರು ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಬಳಸಿ ಶಾಲಾ ಲಾಗಿನ್ ಮೂಲಕ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಬೆಳಿಗ್ಗೆ 9:45 ರಿಂದ 10:00: ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಪ್ರಶ್ನೆಪತ್ರಿಕೆಗಳ ಮುದ್ರಣ (ಪ್ರಿಂಟಿಂಗ್).

ಬೆಳಿಗ್ಗೆ 10:15: ಪರೀಕ್ಷಾ ಕೊಠಡಿಗಳಿಗೆ ಪ್ರಶ್ನೆಪತ್ರಿಕೆಗಳ ಪ್ಯಾಕೆಟ್ ವಿತರಣೆ.

ಬೆಳಿಗ್ಗೆ 10:30: ಪರೀಕ್ಷೆ ಪ್ರಾರಂಭ.

ಕಟ್ಟುನಿಟ್ಟಿನ ಕಾನೂನು ಕ್ರಮದ ಎಚ್ಚರಿಕೆ

ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅಥವಾ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಬಿಎನ್‌ಎಸ್ (BNS) ಕಾಯ್ದೆ-2023, ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಮಂಡಳಿ ಕಾಯ್ದೆ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅನುದಾನಿತ ಶಾಲೆಗಳಲ್ಲಿ ಲೋಪ ಕಂಡುಬಂದರೆ ಅನುದಾನ ಹಿಂಪಡೆಯುವುದು ಮತ್ತು ಅನುದಾನ ರಹಿತ ಶಾಲೆಗಳ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು ಎಂದು ಇಲಾಖೆ ಕಟು ಎಚ್ಚರಿಕೆ ನೀಡಿದೆ.

Join WhatsApp

Join Now

Join Telegram

Join Now