Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಂಗಭೂಮಿಯಲ್ಲಿ ನಟರ ದೊಡ್ಡ ಪರಂಪರೆ ಹುಟ್ಟುಹಾಕಿದ ಕೀರ್ತಿ ಜಂಬೆಯವರದ್ದು : ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 : ಭಾರತೀಯ ರಂಗಭೂಮಿಯಲ್ಲಿ ಸುಮಾರು ಐದು ದಶಕಗಳ ಕಾಲ ಸೃಜನಾತ್ಮಕ ರಂಗ ನಿರ್ದೇಶಕರಾಗಿ ವಿಶಿಷ್ಠ ಶೈಲಿಯಲ್ಲಿ ರಂಗಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಸಿ.ಆರ್.ಜಂಬೆಯವರಿಗೆ ರಾಜ್ಯೋತ್ಸವ, ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದ ಶ್ರೇಷ್ಠ ಪ್ರಶಸ್ತಿಗಳು ಲಭಿಸಿವೆ ಎಂದು ಭೋವಿ ಗುರುಪೀಠಾಧ್ಯಕ್ಷ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹೇಳಿದರು.

ನಗರದ ಗಾರೇಹಟ್ಟಿ ಗ್ರಾಮದ ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೆಪ್ಟಂಬರ್ 17 ರಂದು ಗುರುವಾರ ಬೆಳಿಗ್ಗೆ 10-30ಕ್ಕೆ ರಂಗಸೌರಭ ಕಲಾ ಸಂಘ ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗಸಾಹಿತ್ಯ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಂಗಭೂಮಿಗೆ ಹೊಸ ಆಯಾಮ, ರಂಗಶಿಕ್ಷಣಕ್ಕೆ ಶಿಸ್ತು ಮತ್ತು ಪ್ರಯೋಗಶೀಲತೆಗೆ ಹೊಸದಿಕ್ಕು ನೀಡಿದ ಹಿರಿಯ ರಂಗನಿರ್ದೇಶಕ, ರಂಗಚಿಂತಕ, ರಂಗಸಾಹಿತಿ ಚಿದಂಬರರಾವ್ ಜಂಬೆ ಅವರಿಗೆ ರಂಗ ಪುಷ್ಪನಮನ, ರಂಗಸಂಗೀತ, ರಂಗ ಉಪನ್ಯಾಸ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಜಂಬೆಯವರ ಕಠೋರ ನೇರನುಡಿ ಮತ್ತು ಶ್ರಮದ ಮೂಲಕ ನಾಟಕ ಕಟ್ಟುವ ಬಗ್ಗೆ ನಟರಿಗೆ ಕಾಡಿದಷ್ಟು ಮತ್ಯಾವ ನಿರ್ದೇಶಕರೂ ಕಾಡುತ್ತಿದ್ದಿಲ್ಲ. ಕನ್ನಡ ರಂಗಭೂಮಿಯಲ್ಲಿ ನಟರ ದೊಡ್ಡ ಪರಂಪರೆಯನ್ನು ಹುಟ್ಟುಹಾಕಿದ ಕೀರ್ತಿ ಜಂಬೆಯವರಿಗೆ ಸಲ್ಲುತ್ತದೆ. ಮನುಷ್ಯ ತಾನಾಗಿಯೇ ರಂಗಭೂಮಿ ಮುಖೇನ ವಾಸ್ತವದ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮತ್ತೊಬ್ಬರ ಬಳಿ ಉದ್ಯೋಗಕ್ಕೆ ಕೈಚಾಚದೆ ಬೇರೆಯವರಿಗೂ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಲಾವಿದರನ್ನು ಬೆಳೆಸಿದ್ದಾರೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಂಬೆಯವರು ಯಾವುದೇ ನಾಟಕವನ್ನು ರಂಗಕ್ಕೆ ತರುವ ಮುನ್ನ ತೀವ್ರವಾದ ಅಧ್ಯಯನ ಮಾಡುತ್ತಿದ್ದರು. ರಂಗ ನಿರ್ದೇಶಕ ಮಾತ್ರವಲ್ಲದೆ ಅವರೊಬ್ಬ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನೀನಾಸಂ ರಂಗ ಶಿಕ್ಷಣ ಕೇಂದ್ರಕ್ಕೆ ಪ್ರಾಚಾರ್ಯರಾಗಿ 22 ವರ್ಷಗಳ ಕಾಲ ಹೆಗಲುಕೊಟ್ಟು ರಂಗಭೂಮಿಯನ್ನು ಕಟ್ಟಿದ್ದಾರೆ. ನಂತರ ಕೆ.ವಿ.ಸುಬ್ಬಣ್ಣರೊಂದಿಗೆ ಸಮಾಲೋಚಿಸಿ ತಿರುಗಾಟಕ್ಕೆ ಹೊಸ ಆಯಾಮವನ್ನು ನೀಡಿದರು.

ನಿವೃತ್ತ ಪ್ರಾಚಾರ್ಯ ಹಾಗೂ ರಂಗ ವಿಮರ್ಶಕ ಡಾ.ವಿ.ಬಸವರಾಜ್ ಇವರು ನೀನಾಸಂ ಚಿದಂಬರರಾವ್ ಜಂಬೆಯವರ ರಂಗಬದುಕು ಮತ್ತು ರಂಗಸಾಧನೆ ಬಗ್ಗೆ ಉಪನ್ಯಾಸ ನೀಡುತ್ತ ವೃತ್ತಿಯಲ್ಲಿ ರಂಗ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಕಥೆಗಾರರಾಗಿದ್ದರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಯಕ್ಷಗಾನದಲ್ಲಿಯೂ ಪ್ರಾವಿಣ್ಯತೆ ಪಡೆದಿದ್ದರು. ಜಂಬೆಯವರು ಮೂಲತಃ ಸಾಗರ ತಾಲ್ಲೂಕಿನ ಅಡ್ಡೇರಿ ಕುಗ್ರಾಮದಿಂದ ಬಂದಿದ್ದು ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ರಂಗ ನಿರ್ದೇಶಕರಾಗಿ ಹೊರಹೊಮ್ಮಿದ್ದರು. ನಾಟಕ, ಕಿರುತೆರೆ ಹಾಗೂ ಬೆಳ್ಳಿತೆರೆಗಳಲ್ಲಿ ಹೆಸರಾಂತ ಕಲಾ ಬಳಗದ ನಟರನ್ನು ಕನ್ನಡ ನಾಡಿಗೆ ಕೊಡುಗೆ ನೀಡಿದ್ದಾರೆ.

ರಂಗ ನಿರ್ದೇಶಕ ಹಾಗೂ ನೀನಾಸಂ ಪದವೀಧರ ಕೆ.ಪಿ.ಎಂ.ಗಣೇಶಯ್ಯ ನುಡಿನಮನ ಸಲ್ಲಿಸುತ್ತಾ ಮಾತನಾಡಿ ಜಂಬೆಯರು ರಂಗಶಿಸ್ತಿನ ಮೂಲಕ ಹಲವಾರು ನಾಟಕಗಳನ್ನು ವಿಶಿಷ್ಟ ಶೈಲಿಯ ರಂಗಭೂಮಿ ಛಾಪನ್ನು ಮೂಡಿಸಿದ್ದರು. ಸಿದ್ಧಿ ಸಮುದಾಯದ ಬದುಕನ್ನು ರಂಗಕ್ಕೆ ಪರಿಚಯಿಸಿದ ಕಪ್ಪುಜನ ಕೆಂಪುನೆರಳು ಗಮನಾರ್ಹ ಪ್ರಯೋಗಗಳಲ್ಲಿ ಒಂದಾಗಿತ್ತು. ಆ ಊರು ಈ ಊರು, ತಲೆದಂಡ, ಚೆರ್ರಿ ಹಣ್ಣಿನ ತೋಟ, ಬಿರುದಂತೆಂಬರ ಗಂಡ, ಕತ್ತಲೆಗೆ ಹತ್ತು ತಲೆ, ಅಥೆನ್ಸಿನ ಅರ್ಥವಂತ ಮುಂತಾದ ಖ್ಯಾತ ನಾಟಕಗಳಮ್ನು ನಿರ್ದೇಶಿಸಿದ್ದಾರೆ. ಸಂಸ್ಕøತ ನಾಟಕಗಳಲ್ಲದೇ ಪಾಶ್ಚಿಮಾತ್ಯ ಆಧುನಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಕನ್ನಡದ ಸತ್ವಶಾಲಿ ನಾಟಕಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿದ ಶ್ರೇಯಸ್ಸು ಜಂಬೆಯವರಿಗೆ ಸಲ್ಲುತ್ತದೆ ಎಂದರು.

ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಂ.ಜಿ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ, ಭಾರತೀಯ ಸಂಸ್ಕøತಿ ಚಿಂತಕ ಸಿ.ಪಿ.ಜಾÐನದೇವ್, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಯೋಗಥೆರಪಿ ಚಿಕಿತ್ಸಕ ಎಂ.ಬಿ.ಮುರುಳಿ ಉಪನ್ಯಾಸಕಿ ರವಿಕಲಾ ಯೋಗೀಶ್, ಕಲಾವಿದ ಮರಡಿ ರಾಜು ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ರಂಗಸೌರಭ ಕಲಾವಿದರು ಬಿ.ವಿ.ಕಾರಂತರ ಸಂಗೀತ ಸಂಯೋಜನೆಯ ಹಲವು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಬೃಹನ್ಮಠ ಪಪೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now