ಸುದ್ದಿಒನ್,ಚಿತ್ರದುರ್ಗ, ಸೆಪ್ಟೆಂಬರ್. 16 :
ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ರಾಜ್ಯ ಪಠ್ಯಕ್ರಮ ವಿಭಾಗದ ವಿದ್ಯಾರ್ಥಿಗಳು ದಿನಾಂಕ : 03.09.2026 ಹಾಗೂ 04.09.2026ರಂದು ಚಿತ್ರದುರ್ಗದಲ್ಲಿ ನಡೆದ 17 ವರ್ಷದೊಳಗಿನ ಹೋಬಳಿ ವಿಭಾಗದ ಅಥ್ಲೇಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
| ಕ್ರ. ಸಂ. | ವಿದ್ಯಾರ್ಥಿಯ ಹೆಸರು | ತರಗತಿ | ಸ್ಪರ್ಧೆ | ಗಳಿಸಿದ ಸ್ಥಾನ |
|---|---|---|---|---|
| 01 | ಸಮೃದ್ ಪಿ ಸಿ | 10ನೇ ತರಗತಿ | 3000 ಮೀ ಓಟ 1500 ಮೀ ಓಟ 800 ಮೀ ಓಟ |
ಪ್ರಥಮ ಸ್ಥಾನ |
| 02 | ಇಂದುಧರ್ ಆರ್ | 10ನೇ ತರಗತಿ | 400 ಮೀ ಹರ್ಡಲ್ಸ್ 110 ಹರ್ಡಲ್ಸ್ |
ಪ್ರಥಮ ಸ್ಥಾನ |
| 03 | ವಿನಯ್ ಆರ್ ಎಲ್ | 10ನೇ ತರಗತಿ | 200 ಮೀ ಓಟ | ತೃತೀಯ ಸ್ಥಾನ |
| 04 | ಗಗನ್ ಬಾಗೇವಾಡಿ | 9ನೇ ತರಗತಿ | ಹ್ಯಾಮರ್ ಥ್ರೋ | ಪ್ರಥಮ ಸ್ಥಾನ |
| 05 | ಉಮಾಶಂಕರ್ | 9ನೇ ತರಗತಿ | 400 ಮೀ ಹರ್ಡಲ್ಸ್ 110 ಹರ್ಡಲ್ಸ್ |
ದ್ವಿತೀಯ ಸ್ಥಾನ ತೃತೀಯ ಸ್ಥಾನ |
| 06 | ವಿಕಾಸ್ ನಾಯಕ ಕೆ.ಎಂ | 9ನೇ ತರಗತಿ | ತ್ರಿವಿಧ ಜಿಗಿತ | ದ್ವಿತೀಯ ಸ್ಥಾನ |
| 07 | ಸಮೃದ್ ಪಿ ಸಿ | 10ನೇ ತರಗತಿ | 4 × 400 ರಿಲೇ ಓಟ | ಪ್ರಥಮ ಸ್ಥಾನ |
| 08 | ಇಂದುಧರ್ ಆರ್ | 10ನೇ ತರಗತಿ | 4 × 400 ರಿಲೇ ಓಟ | ಪ್ರಥಮ ಸ್ಥಾನ |
| 09 | ಸುಹಾಸ್ ಡಿ.ವಿ | 10ನೇ ತರಗತಿ | 4 × 400 ರಿಲೇ ಓಟ | ಪ್ರಥಮ ಸ್ಥಾನ |
| 10 | ವಿಕಸ್ ನಾಯಕ ಕೆ ಎಂ | 9ನೇ ತರಗತಿ | 4 × 400 ರಿಲೇ ಓಟ | ಪ್ರಥಮ ಸ್ಥಾನ |
| 11 | ಸಮೃದ್ ಪಿ ಸಿ | 10ನೇ ತರಗತಿ | 4 × 100 ರಿಲೇ ಓಟ | ದ್ವಿತೀಯ ಸ್ಥಾನ |
| 12 | ಇಂದುಧರ್ ಆರ್ | 10ನೇ ತರಗತಿ | 4 × 100 ರಿಲೇ ಓಟ | ದ್ವಿತೀಯ ಸ್ಥಾನ |
| 13 | ಸುಹಾಸ್ ಡಿ.ವಿ | 10ನೇ ತರಗತಿ | 4 × 100 ರಿಲೇ ಓಟ | ದ್ವಿತೀಯ ಸ್ಥಾನ |
| 14 | ವಿನಯ್ ಆರ್ ಎಲ್ | 10ನೇ ತರಗತಿ | 4 × 100 ರಿಲೇ ಓಟ | ದ್ವಿತೀಯ ಸ್ಥಾನ |
ಹೋಬಳಿ ವಿಭಾಗದ ಅಥ್ಲೇಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಮತ್ತು ದ್ವಿತೀಯ, ತೃತೀಯ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಈ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಐಸಿಎಸ್ಇ ಪ್ರಾಚಾರ್ಯರಾದ, ಬೀನಾ ಎ ಜಾನ್ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.











