ಬೆಂಗಳೂರು: ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಅದರಲ್ಲಿ ಮೇಕೆದಾಟು ಯೋಜನೆಗೆ 1000 ಕೋಟಿ ಅನುದಾನವನ್ನ ಮೀಸಲಿಟ್ಟಿದ್ದಾರೆ.
ಉಳಿದಂತೆ, ಕೃಷಿ ಚಟುವಟಿಕೆಗೆ 8,457 ಕೋಟಿ, 11,222 ಕೋಟಿ ಒಳಾಡಳಿತ ಮತ್ತು ಸಾರಿಗೆ ಇಲಾಖೆ, 31,980 ಶಿಕ್ಷಣ ಇಲಾಖೆ, 16,076 ನಗರಾಭಿವೃದ್ಧಿ, 16,388 ಕಂದಾಯ ಇಲಾಖೆ, ವಸತಿ ಇಲಾಖೆಗೆ 3,594 ಕೋಟಿ, 2,288 ಕೋಟಿ ಆರೋಗ್ಯ ಇಲಾಖೆ, 4,713 ಕೋಟಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, 1,500ಕೋಟಿ ನೀರು ಸಂಸ್ಕರಣಾ ಘಟಕ, 10,447 ಕೋಟಿ ಲೋಕೋಪಯೋಗಿ, 20,601 ಕೋಟಿ ಜಲ ಸಂಪನ್ಮೂಲ, 5 ಎಕರೆಗೆ ಡಿಸೇಲ್ ಸಹಾಯ.
300 ಸರ್ಕಾರಿ ಐಟಿಐ ಕಾಲೇಜುಗಳ ಮೇಲ್ದರ್ಜೆ
ಹಗರಿಯಲ್ಲಿ ಹೊಸ ಕೃಷಿ ಕಾಲೇಜು. ಕಲಬುರಗಿ, ಯಾದಗಿರಿಯಲ್ಲಿ ತೊಗರಿ ಭೀಮಾ ಕೇಂದ್ರ. ಕೊವಿಡ್ ನಿಂದ ನಷ್ಟ ಅನುಭವಿಸಿದವರಿಗೆ ಅನುದಾನ, 300 ಮಹಿಳಾ ಸ್ವಾಸ್ಥ್ಯ ಕೇಂದ್ರ. 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ. ಗ್ರಾಮೀಣ ಭಾಗದ ಜನರಿಗೆ ತಾಲೂಕು ಮಟ್ಟದಲ್ಲಿ ಹೃದಯ ಚಿಕಿತ್ಸೆ. ಡಯಾಲಿಸಿಸ್ ಸೈಕಲ್ ಗಳ ಹೆಚ್ಚಳ, ಜಿಲ್ಲಾ ಮಟ್ಟದಲ್ಲಿ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ.