ಸಂಕಷ್ಟದಲ್ಲಿದ್ದಾಗ ಸ್ಪಂದಿಸಿದವರೇ ಬಂಧುಗಳು ಅನ್ನೊ ಮಾತಿದೆ. ಈಗ ಭಾರತೀಯ ವಿದ್ಯಾರ್ಥಿಗಳಿಗೆ ಪೋಲ್ಯಾಂಡ್ ಸರ್ಕಾರ ಬಂಧುವೇ ಆಗಿ ಬಿಟ್ಟಿದೆ. ರಷ್ಯಾ ಉಕ್ರೇನ್ ನಡೆದ ವಿನ ಯುದ್ಧ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಭಾರತ ಸರ್ಕಾರ ನಮ್ಮವರನ್ನ ಅಲ್ಲಿಂದ ಸೇಪೊಅಗಿ ಕರೆತರುವಲ್ಲಿ ಶ್ರಮಿಸುತ್ತಿದೆ. ಈಗಾಗಲೇ ನಾಲ್ಕು ವಿಮಾನದಲ್ಲಿ ಒಂದಷ್ಟು ಜನರನ್ನ ಕರೆ ತಂದಿದೆ.
ಈ ಬಿಕ್ಕಟ್ಟಿನ ನಡುವೆ ಪೋಲ್ಯಾಂಡ್ ಸರ್ಕಾರವೂ ಸಹಾಯಕ್ಕೆ ನಿಂತಿದೆ. ಉಕ್ರೇನ್ ನಿಂದ ತಪ್ಪಿಸಿಕೊಂಡು ಬರುವ ಭಾರತೀಯರಿಗೆ ಯಾವುದೇ ವೀಸಾ ಇಲ್ಲದೆ ತಮ್ಮ ದೇಶದ ಒಳಗೆ ಬರಲು ಅನುಮತಿ ನೀಡಿತ್ತು. ಅದರಂತೆ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್ ನಿಂದ ಗಡಿಭಾಗಕ್ಕೆ ತಪ್ಪಿಸಿಕೊಂಡು ಪೋಲ್ಯಾಂಡ್ ಪ್ರದೇಶಗಳನ್ನ ತಲುಪಿದ್ದಾರೆ.
Food, drink and beds are awaiting Indian students who can cross into Poland from Ukraine. They will stay here until flights to India are organised. pic.twitter.com/lehJGbrTAV
— Naomi Canton (@naomi2009) February 28, 2022
ಆದ್ರೆ ಪೋಲ್ಯಾಂಡ್ ಸರ್ಕಾರ ಕೇವಲ ಅನುಮತಿಯನ್ನಷ್ಟೇ ಕೊಟ್ಟಿಲ್ಲ.ಮಾನವೀಯ ನೆಲೆಗಟ್ಟಿನಲ್ಲಿ ಒಂದಷ್ಟು ಮಾನವೀಯತೆಯನ್ನು ಮೆರೆದಿದೆ. ಉಳಿದುಕೊಳ್ಳಲು ತುರ್ತು ಶೆಲ್ಟರ್ ವ್ಯವಸ್ಥೆ ಮಾಡಿದ್ದು, ಆಹಾರ, ನೀರು ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಈ ಮಧ್ಯೆ ಭಾರತೀಯ ಪೋಲ್ಯಾಂಡ್ ರಾಯಬಾರಿ ಕಚೇರಿ ವಿದ್ಯಾರ್ಥಿಗಳನ್ನ ಏರ್ ಲಿಫ್ಟ್ ಮಾಡುವ ಯೋಜನೆ ಮಾಡಿದೆ. ವಿದ್ಯಾರ್ಥಿಗಳಿಗೆ ಒಂದಷ್ಟು ಮಾರ್ಗಸೂಚಿಗಳನ್ನು ನೀಡಿದೆ.