Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಅಲಾಸ್ಕಾದಲ್ಲಿ 8 ಮಂದಿ ಇದ್ದ ಚಾರ್ಟರ್ ವಿಮಾನ ಪತನ

---Advertisement---

ಅಲಾಸ್ಕಾ, ಆಗಸ್ಟ್ 21: ಅಮೆರಿಕದ ಅಲಾಸ್ಕಾದ ಪಶ್ಚಿಮ ಭಾಗದಲ್ಲಿ 8 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ನೀಡಿರುವ ಮಾಹಿತಿಯಂತೆ, ಅವಳಿ ಎಂಜಿನ್ ಹೊಂದಿರುವ ಸೆಸ್ನಾ ಚಾರ್ಟರ್ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಹಾಗೂ ಆರು ಪ್ರಯಾಣಿಕರು ಸೇರಿದಂತೆ ಒಟ್ಟು 8 ಮಂದಿ ಇದ್ದರು. ವಿಮಾನವು ಆಂಕೊರೇಜ್‌ನಿಂದ ಕೇಪ್ ನ್ಯೂನಮ್‌ನತ್ತ ತೆರಳುತ್ತಿತ್ತು.

ಕೇಪ್ ನ್ಯೂನಮ್‌ನಲ್ಲಿರುವ ದೂರದ ರಾಡಾರ್ ಕೇಂದ್ರದ ಸಮೀಪ ವಿಮಾನ ಪತನಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಕೇಪ್ ನ್ಯೂನಮ್‌ಗೆ ಇಳಿಯುವ ಹಂತದಲ್ಲಿ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ವಿಮಾನ ಅಪಘಾತದ ಮಾಹಿತಿ ಲಭ್ಯವಾದ ತಕ್ಷಣ ಅಲಾಸ್ಕಾ ರೆಸ್ಕ್ಯೂ ಕೋಆರ್ಡಿನೇಷನ್ ಸೆಂಟರ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಆದರೆ ಅಪಘಾತ ಸಂಭವಿಸಿರುವ ಪ್ರದೇಶ ಅತ್ಯಂತ ದೂರದ ಹಾಗೂ ದುರ್ಗಮವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸವಾಲು ಎದುರಾಗಿದೆ.

ವಿಮಾನದಲ್ಲಿದ್ದ 8 ಮಂದಿಯ ಸದ್ಯದ ಸ್ಥಿತಿ ಕುರಿತು ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅಪಘಾತದ ಕಾರಣವೂ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿ ಲಭ್ಯವಾದ ಬಳಿಕ ವಿವರ ಬಹಿರಂಗವಾಗುವ ನಿರೀಕ್ಷೆಯಿದೆ.

Join WhatsApp

Join Now

Join Telegram

Join Now