ಧಾರವಾಡ: ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ಬಜವನ್ನು ಹಾರಿಸಬಹುದು ಎಂದು ಸಚಿವ ಈಶ್ವರಪ್ಪ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಧರಣಿ ನಡೆಸಿದರು. ಈ ಬಗ್ಗೆ ಇದೀಗ ಶಾಸಕ ಅಮೃತ್ ದೇಸಾಯಿ, ಈಶ್ವರಪ್ಪ ಅವರು ನೀಡಿದ ಹೇಳಿಕೆಯಲ್ಲಿ ತಪ್ಪದೇನಿದೆ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನಿದೆ. ಮುಂದೊಂದು ದಿನ ಕೆಂಪು ಕೋಟೆ ಮೇಲೆ ಭಗವಾಧ್ವಜ ಹಾರುತ್ತೆ ಎಂದು ಈಶ್ವರಪ್ಪ ಹೇಳಿದ್ದರು. ಅವರು ರಾಷ್ಟ್ರಧ್ವಜ ಇಳಿಸುತ್ತೇವೆ ಎಂದೇನು ಹೇಳಿಲ್ಲವಲ್ಲ. ನೂರಾರು ವರ್ಷಗಳ ಬಳಿಕ ಭಗವಾಧ್ವಜ ಹಾರಬಹುದು ಎಂದಿದ್ದಾರೆ. ಎಲ್ಲರಿಗೂ ರಾಷ್ಟ್ರಧ್ವಜ ಮುಖ್ಯ.

ಕಳೆದೊಂದು ತಿಂಗಳಿನಿಂದ ಹಿಜಾಬ್ ವಿವಾದ ಆಗಿದೆ. ಕೋರ್ಟ್ ಮಧ್ಯಂತರ ಆದೇಶ ನೀಡಿದೆ.ದೇಶದ ಕಾನೂನು ಗೌರವಿಸುವವರು ಈ ದೇಶದಲ್ಲಿರಲಿ, ಇಲ್ಲವೇ ದೇಶ ಬಿಟ್ಟು ಹೋಗಲಿ. ಕೆಲವು ಮುಸ್ಲಿಂ ಯುವತಿಯರು ಕೋರ್ಟ್ ಆದೇಶವನ್ನೇ ಉಲ್ಲಂಘಿಸುವ ಸೊಕ್ಕಿನ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


