Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಸ್ಟ್ರೇಲಿಯಾದಲ್ಲಿ H5N1 ಹಕ್ಕಿ ಜ್ವರದ ಆರ್ಭಟ : ಕೋಳಿ ಫಾರ್ಮ್‌ಗಳು ಲಾಕ್‌ಡೌನ್!

---Advertisement---

ಸಿಡ್ನಿ.ಆಗಸ್ಟ್.9 : ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಹೆಚ್5ಎನ್‌1 (H5N1) ಹಕ್ಕಿ ಜ್ವರ (ಬರ್ಡ್ ಫ್ಲೂ) ತೀವ್ರವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೋಳಿ ಫಾರ್ಮ್‌ಗಳಿಗೆ ಕಡ್ಡಾಯ ಲಾಕ್‌ಡೌನ್‌ ವಿಧಿಸಲಾಗಿದೆ. ಕಾಡುಪಕ್ಷಿಗಳಲ್ಲಿ ಈ ಮಾರಕ ವೈರಸ್ ಶರವೇಗದಲ್ಲಿ ಹರಡುತ್ತಿರುವುದು ಆತಂಕ ಮೂಡಿಸಿದೆ.

ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಕೃಷಿ ಸಚಿವೆ ಜೂಲಿ ಕಾಲಿನ್ಸ್, “ಮುಂದಿನ ದಿನಗಳಲ್ಲಿ ವನ್ಯಜೀವಿಗಳು ಮತ್ತು ಪಕ್ಷಿಗಳಲ್ಲಿ ಈ ವೈರಸ್ ಇನ್ಮುಂದೆ ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆಯಿದೆ” ಎಂದು ಎಚ್ಚರಿಸಿದ್ದಾರೆ.

ಏನಿದು ಹೆಚ್5ಎನ್‌1 ವೈರಸ್?

ಹೆಚ್5ಎನ್‌1 ಎಂಬುದು ಇನ್‌ಫ್ಲುಯೆಂಜಾ-ಎ ಮಾದರಿಯ ತೀವ್ರ ಸಾಂಕ್ರಾಮಿಕ ವೈರಸ್. ಇದು ಪ್ರಮುಖವಾಗಿ ಪಕ್ಷಿಗಳು, ಹಸುಗಳು ಮತ್ತು ಇತರೆ ಸಸ್ತನಿಗಳಲ್ಲಿ ಕಂಡುಬರುತ್ತದೆ. ಸೋಂಕಿತ ಪಕ್ಷಿ ಅಥವಾ ಪ್ರಾಣಿಗಳ ನಿಕಟ ಸಂಪರ್ಕಕ್ಕೆ ಬರುವ ಕೋಳಿ ಫಾರ್ಮ್ ಕಾರ್ಮಿಕರಿಗೆ ಹಾಗೂ ಜನರಿಗೆ ಇದು ಹರಡುವ ಅಪಾಯವಿರುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ವಿರಳವಾಗಿದ್ದರೂ, ಬದಲಾಗುತ್ತಿರುವ ವೈರಸ್‌ ರೂಪಾಂತರಗಳು ಮಾನವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಮರ್ಥ್ಯ ಹೊಂದಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ರೋಗಲಕ್ಷಣಗಳು:

ಕಣ್ಣು ಕೆಂಪಾಗುವುದು (Conjunctivitis)

ತೀವ್ರ ಜ್ವರ ಮತ್ತು ಆಯಾಸ

ಕೆಮ್ಮು ಮತ್ತು ತಲೆನೋವು

ಅತಿಸಾರ (ವೈರಲ್ ಡೈರಿಯಾ)

ಗಂಭೀರ ಹಂತದಲ್ಲಿ ಶ್ವಾಸಕೋಶದ ಸೋಂಕು (ನ್ಯುಮೋನಿಯಾ) ಹಾಗೂ ಉಸಿರಾಟದ ತೊಂದರೆ.

ಭಾರತಕ್ಕೂ ಇದೆಯಾ ಹಕ್ಕಿ ಜ್ವರದ ಭೀತಿ?

ಭಾರತದಲ್ಲಿ ಕೋಳಿ ಸಾಕಾಣಿಕೆ (ಪೌಲ್ಟ್ರಿ ಫಾರ್ಮ್‌) ಬೃಹತ್ ಪ್ರಮಾಣದಲ್ಲಿದ್ದು, ವೈರಸ್ ಹರಡುವ ಅಪಾಯ ಹೆಚ್ಚು ಎಂದು ರೆಡ್‌ಕ್ಲಿಫ್ ಲ್ಯಾಬ್ಸ್‌ನ ವೈದ್ಯಕೀಯ ಸಲಹೆಗಾರ ಡಾ. ಅಶೋಕ್ ರತ್ತನ್ ತಿಳಿಸಿದ್ದಾರೆ.

ಹಿನ್ನೆಲೆ: ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ ಮಹಾರಾಷ್ಟ್ರದಲ್ಲಿ ಹೆಚ್5ಎನ್‌1 ಪತ್ತೆಯಾಗಿತ್ತು.

ಪ್ರಸ್ತುತ ಸ್ಥಿತಿ: ಇದುವರೆಗೆ ದೇಶಾದ್ಯಂತ 284 ಹೆಚ್5ಎನ್‌1 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅತಿ ಹೆಚ್ಚು ಕೇಸ್‌ಗಳು ಕಂಡುಬಂದಿವೆ.

ಮಾನವರಲ್ಲಿ ಸೋಂಕು: ಭಾರತದಲ್ಲಿ ಇದುವರೆಗೆ ಕೇವಲ ಇಬ್ಬರು ವ್ಯಕ್ತಿಗಳಲ್ಲಿ ಮಾತ್ರ ಈ ಸೋಂಕು ದೃಢಪಟ್ಟಿದೆ.

ಸದ್ಯಕ್ಕೆ ಮಾನವರಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆಯಿದ್ದರೂ, ಪೌಲ್ಟ್ರಿ ಫಾರ್ಮ್ ನಿರ್ವಹಣೆ ಮಾಡುವವರು ಮತ್ತು ಕೋಳಿ ಮಾಂಸ ಮಾರಾಟಗಾರರು ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.

Join WhatsApp

Join Now

Join Telegram

Join Now