ರಷ್ಯಾ ಸದ್ಯ ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ಈಗಾಗಲೇ ದಾಳಿ ಪ್ರತಿದಾಳಿ ಆರಂಭವಾಗಿದೆ. ಈ ಮಧ್ಯೆ ಹಲವು ಭಾರತೀಯರು ರಷ್ಯಾದಿಂದ ದೆಹಲಿಗೆ ವಾಪಾಸ್ಸಾಗಿದ್ಸಾರೆ. ಆದ್ರೆ ಕರ್ನಾಟಕದ 10 ಮಂದಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
ಉಕ್ರೇನ್ ನಲ್ಲಿ ತಮ್ಮ ಮಕ್ಕಳು ಸಿಲುಕಿರುವ ಸಂಬಂಧ ಬೆಂಗಳೂರಿನಲ್ಲಿ ಪೋಷಕರು ಆತಂಕದಲ್ಲಿದ್ದಾರೆ. ಕ್ಷಣ ಕ್ಷಣಕ್ಕೂ ಯುದ್ಧದ ಭೀತಿ ಹೆಚ್ಚಾಗಿದ್ದು, ಮಕ್ಕಳ ಜೊತೆಗೆ ವಾಟ್ಸಾಪ್ ಕಾಲ್, ವಿಡಿಯೋ ಕಾಲ್ ನಲ್ಲಿ ಧೈರ್ಯ ತುಂಬುತ್ತಿದ್ದಾರೆ.
ಭಾರತಕ್ಕೆ ವಾಪಾಸ್ಸಾಗಲು ವಿಮಾನ ಸಿಕ್ಕಿಲ್ಲ. ಹೀಗಾಗಿ ಮಕ್ಕಳು ಗೊಂದಲದಲ್ಲಿದ್ದಾರೆ. ಆದ್ರೆ ಈ ಮಧ್ಯೆ ಪೋಷಕರಿಗೆ ಧೈರ್ಯ ತುಂಬುತ್ತಿದ್ದಾರೆ. ಬೆಳಗ್ಗೆಯಿಂದಲೂ ಬಾಂಬ್ ಬ್ಲಾಸ್ಟ್ ಸದ್ದು ಕೇಳಿಸುತ್ತಲೇ ಇದೆ. ಇದು ಇತ್ತ ಪೋಷಕರಿಗೂ ಆತಂಕಕ್ಕೀಡು ಮಾಡಿದೆ. ವಿದ್ಯಾರ್ಥಿಗಳ ಜೊತೆ ವಿದೇಶಾಂಗ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕೂಡ ತಿಳಿಸಿದ್ದಾರೆ.