ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷ ಎಂಬಾತ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಿದ್ದಾಗ ಕಾರಿನಲ್ಲಿ ಬಂದ ಗುಂಪೊಂದು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿತ್ತು. ತಕ್ಷಣ ಆತನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ರು ಸಹ ಹರ್ಷ ಮೃತಪಟ್ಟಿದ್ದಾರೆ.
ಈ ಸಂಬಂಧ ಸಚಿವ ಈಶ್ವರಪ್ಪ ನಗರದಲ್ಲಿ ಮಾತನಾಡಿದ್ದು, ನಮ್ಮ ಸಜ್ಜನ ಕಾರ್ಯಕರ್ತನ ಕಲೆಯಾಗಿದ್ದು. ಇದು ಮುಸಲ್ಮಾನ ಗೂಂಡಾಗಳಿಂದಲೇ ನಡೆದಿದೆ. ಶಿವಮೊಗ್ಗದಲ್ಲಿ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಡಿಕೆ ಶಿವಕುಮಾರ್ ಅವರ ಪ್ರಚೋದನಕಾರಿ ಹೇಳಿಕೆಯಿಂದ ಕುಮ್ಮಕ್ಕು ಪಡೆದು ಈಗ ಬಾಲ ಬಿಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂಥಹ ಗೂಂಡಾಗಿರಿ ಬೆಳೆಯಲು ಬಿಡುವುದಿಲ್ಲ. ದಮನ ಮಾಡುತ್ತೇವೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಬಳಿ ಚರ್ಚಿಸುತ್ತೇನೆ. ಹರ್ಷನ ಸಾವು ತುಂಬಾ ನೋವು ತಂದಿದೆ. ತುಂಬಾ ಪ್ರಾಮಾಣಿಕ ಕಾರ್ಯಕರ್ತನಾಗಿದ್ದ. ಆದ್ರೆ ಕೇಸರಿ ಶಾಲು ಹಂಚಿದ್ದಾರೆ, ರಾಷ್ಟ್ರಧ್ವಜ ತೆಗೆದು ಭಾಗವಧ್ವಜ ಹಾರಿಸಿದ್ದಾರೆ ಎಂಬಂತ ಡಿ ಕೆ ಶಿವಕುಮಾರ್ ಅವರ ಹೇಳಿಕೆಗಳಿಗೆ ಪ್ರಚೋದನೆಗೊಂಡು ಇಂತ ಕೃತ್ಯ ಎಸಗಿದ್ದಾರೆಂದು ಆರೋಪಿಸಿದ್ದಾರೆ.